Advertisement
ನಮ್ಮದು ಬಡವರ ಸೇವೆಗಾಗಿಯೇ ಇರುವ ಸರಕಾರ ಎಂದ ಮೋದಿ, ಹಿಂದಿನ ಸರಕಾರಗಳ ಆಡಳಿತವನ್ನೂ ಟೀಕಿಸಿದರು. ನಾನು ಚಿಕ್ಕವನಾಗಿದ್ದಾಗ ತೀರಾ ಪ್ರಭಾವಿಗಳು ಮಾತ್ರ ಎಲ್‌ಪಿಜಿ ಸಂಪರ್ಕ ಹೊಂದಿದ್ದರು. ಅಲ್ಲದೆ ಇದು ಬಡವರು ಉಪಯೋಗಿಸಲು ಅಲ್ಲ, ಅವರಿಗೆ ಇದು ಸುರಕ್ಷೆಯೂ ಅಲ್ಲ ಎಂದು ಬಿಂಬಿಸಿದ್ದರು. ಮತ್ತೆ ನೀವೇಕೆ ಮನೆಯಲ್ಲಿ ಇರಿಸಿಕೊಂಡಿದ್ದೀರಿ ಎಂದು ಕೇಳಿದಾಗ ಅವರು ಮೌನಕ್ಕೆ ಶರಣಾಗಿದ್ದರು. ಕೇವಲ ಶ್ರೀಮಂತರು ಮತ್ತು ಪ್ರಭಾವಿಗಳು ಮಾತ್ರ ಇರಿಸಿಕೊಳ್ಳಬಹುದು ಎಂಬಂತಿದ್ದ ಈ ಎಲ್‌ಪಿಜಿ ಸಂಪರ್ಕವನ್ನು ಬಡವರ ಮನೆಗೂ ತಲುಪಿಸಿದ್ದೇವೆ ಎಂದು ತಮ್ಮ ಸರಕಾರವನ್ನು ಶ್ಲಾಘಿಸಿದರು.
ಇಡ್ಲಿ, ದೋಸೆ ಮಾಡಿದಾಗ ನನ್ನನ್ನೂ ತಿನ್ನಲು ಕರೆಯು ತ್ತೀರಾ? ಇದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ರುದ್ರಮ್ಮನಿಗೆ ಪ್ರಧಾನಿ ಮೋದಿ ಕೇಳಿದ ಪ್ರಶ್ನೆ. ಇದಕ್ಕೆ ತಟ್ಟನೆ ಉತ್ತರಿಸಿದ ಅವರು, “”ನಿಜವಾ ಗಿಯೂ, ಬನ್ನಿ ಮಾಡಿಕೊಡ್ತೇನೆ” ಎಂದರು. ಸಂವಾದದಲ್ಲಿ ಪಾಲ್ಗೊಂ ಡಿದ್ದ ರುದ್ರಮ್ಮನಿಗೆ ಎಲ್‌ಪಿಜಿ ಸಿಲಿಂಡರ್‌ನಿಂದ ನಿಮಗೆ ಉಪಯೋಗವಾಗುತ್ತಿದೆಯೇ ಎಂದು ಮೋದಿ ಪ್ರಶ್ನಿಸಿ ದ್ದರು. ಅದಕ್ಕೆ ಹೌದು, ಹಿಂದೆ ಸೌದೆ ಬಳಸಿ ಅಡುಗೆ ಮಾಡುತ್ತಿದ್ದೆ, ಕಷ್ಟವಾಗುತ್ತಿತ್ತು. ಆದರೆ ಈಗ ಸುಲಭ ವಾಗಿದೆ ಎಂದರು. ಸೌದೆ ಒಲೆಯಲ್ಲಿ ಸರಳವಾಗಿ ಇಡ್ಲಿ, ದೋಸೆ ಮಾಡಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಧಾನಿ ಪ್ರಶ್ನೆಗೆ, ತುಂಬಾ ಕಷ್ಟವಾಗು¤ತಿತ್ತು. ಆದರೆ, ಈಗ ಸಿಲಿಂಡರ್ ಬಂದ ಮೇಲೆ ಸರಳವಾಗಿದೆ ಎಂದರು.
Related Articles
“”ಇದು ರಂಜಾನ್ ತಿಂಗಳಾಗಿದ್ದು, ನಾವು ಪ್ರತಿನಿತ್ಯವೂ ಕುರಾನ್ ಪಠಣ ಮಾಡುತ್ತೇವೆ. ಮುಂದೆಯೂ ನೀವೇ ಪ್ರಧಾನಿಯಾಗಬೇಕು ಎಂದು ನಾವು ಪ್ರಾರ್ಥಿಸುತ್ತಿದ್ದೇವೆ…” ಇದು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಕಾಶ್ಮೀರದ ಅನಂತ್‌ನಾಗ್‌ನ ಮಹಿಳಾ ಗುಂಪೊಂದು ಪ್ರಧಾನಿ ಮೋದಿ ಅವರಿಗೆ ಹಾರೈಸಿದ ಪರಿ. ಈ ಸಂದರ್ಭದಲ್ಲಿ ತಾವು ಚಿಕ್ಕವರಾಗಿದ್ದಾಗ ತಮ್ಮ ನೆರೆಹೊರೆಯಲ್ಲಿದ್ದ ಹಮೀದ್ ಎಂಬುವವರನ್ನು ನೆನೆದ ಪ್ರಧಾನಿ, ಇವರಿಂದ ತಾವು ಪ್ರಭಾವಿತರಾಗಿದ್ದುದನ್ನೂ ನೆನಪಿಸಿಕೊಂಡರು. ಹಮೀದ್ ತನ್ನ ಅಜ್ಜಿ ಒಲೆಯಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದುದನ್ನು ನೋಡಲಾಗದೆ ಈದ್ ಕೊಡುಗೆಯಾಗಿ ಚಿಮಾrವನ್ನು ತಂದುಕೊಟ್ಟದ್ದನ್ನು ಸ್ಮರಿಸಿದರು. ಹಮೀದ್‌ಗೆ ಇದು ಸಾಧ್ಯವಾಗುತ್ತದೆ ಎಂಬುದಾದರೆ ಪ್ರಧಾನಿ ಕೈಯ್ಯಲ್ಲಿ ಏಕೆ ಸಾಧ್ಯವಾಗುವುದಿಲ್ಲ ಅಲ್ಲವೇ ಎಂದರು.
Advertisement