Advertisement

PM Modi ಉಕ್ರೇನ್‌ ಭೇಟಿ: ಸಮತೋಲಿತ ನಡೆ!

01:39 AM Aug 25, 2024 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ಅವರು ಕೈಗೊಂಡ ಉಕ್ರೇನ್‌ ಪ್ರವಾಸ­ವನ್ನು ಪಾಶ್ಚಾತ್ಯ ಮಾಧ್ಯಮಗಳು ಸಮ­ತೋ­ಲಿತ ಪ್ರವಾಸ ಎಂದು ಬಣ್ಣಿಸಿವೆ.

Advertisement

ಮೋದಿ ಮತ್ತು ಝೆಲೆನ್‌ಸ್ಕಿ ನಡು­ವಿನ ಮಾತುಕತೆ ಬಗ್ಗೆ ಒತ್ತು ನೀಡಿರುವ ನ್ಯೂಯಾರ್ಕ್‌ ಟೈಮ್ಸ್‌, ಮೋದಿ ಅವರು ನಾಜೂಕಿನ ಸಮತೋಲಿತ ನಡೆ ಪ್ರದರ್ಶಿ­ಸಿದ್ದಾರೆ ಎಂದು ಹೇಳಿದೆ. ರಾಜತಾಂತ್ರಿಕ ಕಠಿನ ನಡೆ ಎಂದು ಹೇಳಿರುವ ಬಿಬಿಸಿ, ಇದು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಅದೇ ರೀತಿ, ತಟಸ್ಥ ರಾಷ್ಟ್ರಗಳ ಪೈಕಿ ಉಕ್ರೇನ್‌ಗೆ ಭಾರತದ ಭೇಟಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಇದು ಭಾರತ, ಉಕ್ರೇನ್‌ ಮತ್ತು ಪಶ್ಚಿಮ ರಾಷ್ಟ್ರ­ಗಳ ನಡುವಿನ ಸಂಕೀರ್ಣ ಮಾತುಕತೆಯ ಆರಂಭ ಎಂದು ವಾಷಿಂ­ಗ್ಟನ್‌ ಪೋಸ್ಟ್‌ ಹೇಳಿದೆ. ದಿ ಮಾಸ್ಕೋ ಟೈಮ್ಸ್‌ ಮಾತ್ರ ಮೋದಿ ಭೇಟಿಯನ್ನು ಚೂರು ವಿಮ­ಶಾì­­ತ್ಮಕ ರೀತಿಯಲ್ಲಿ ವರದಿ ಮಾಡಿದೆ. ಮೋದಿ ಭೇಟಿಯನ್ನು ಉಕ್ರೇನ್‌ಗೆ ಬೆಂಬಲ ಎನ್ನುವ ರೀತಿಯಲ್ಲಿ ಬಿಂಬಿಸಬೇಕಾಗಿಲ್ಲ. ಅದನ್ನು ವಿಶಾಲ ವ್ಯಾಪ್ತಿ­ಯಲ್ಲಿ ನೋಡಬೇಕು. ಯಾಕೆಂ­ದರೆ ಪಾಶ್ಚಾತ್ಯ ರಾಷ್ಟ್ರಗಳ ನಿಷೇಧದ ಹೊರತಾಗಿಯೂ ಭಾರತವು ರಷ್ಯಾದ ಜತೆ ವ್ಯಾಪಾರ, ವಹಿವಾಟು ಮುಂದುವ­ರಿ­ಸಿಕೊಂಡು ಹೋಗುತ್ತಿದೆ ಎಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next