Advertisement

ಪ್ರಧಾನಿ ಮೋದಿ ಆಸ್ತಿ ಮೌಲ್ಯ 26 ಲಕ್ಷ ರೂ. ಏರಿಕೆ

09:30 AM Aug 10, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಾರೆ 2.23 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದು, ಈ ಪೈಕಿ ಬಹುತೇಕ ಮೊತ್ತ ಬ್ಯಾಂಕ್‌ ಠೇವಣಿಯಾಗಿದೆ. ಏಕೆಂದರೆ, ಗುಜರಾತ್‌ನ ಗಾಂಧಿನಗರದ ಜಮೀನೊಂದರಲ್ಲಿ ಇದ್ದ ಅವರ ಪಾಲನ್ನು ಅವರು ದಾನವಾಗಿ ನೀಡಿರುವ ಕಾರಣ, ಅವರ ಹೆಸರಲ್ಲಿ ಈಗ ಯಾವುದೇ ಸ್ಥಿರಾಸ್ತಿ ಇಲ್ಲ!

Advertisement

ಪ್ರಧಾನಮಂತ್ರಿ ಕಾರ್ಯಾಲಯ(ಪಿಎಂಒ)ದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಮೋದಿ ಅವರ ಆಸ್ತಿ ವಿವರದಲ್ಲಿ ಈ ವಿಚಾರ ಬಹಿರಂಗಪಡಿಸಲಾಗಿದೆ. ಮಾರ್ಚ್‌ 31ರವರೆಗಿನ ಆಸ್ತಿ ವಿವರ ಇದಾಗಿದ್ದು, ಒಟ್ಟಾರೆ ಅವರು 2.23 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ.

ಆಸ್ತಿ ದಾನ ಮಾಡಿದ ಪ್ರಧಾನಿ:
ಪ್ರಧಾನಿ ಮೋದಿ ಅವರು ಯಾವುದೇ ಬಾಂಡ್‌, ಷೇರು ಅಥವಾ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡಿಕೆ ಮಾಡಿಲ್ಲ. ಅವರು ಯಾವುದೇ ವಾಹನವನ್ನೂ ಹೊಂದಿಲ್ಲ. ಆದರೆ, ಅವರ ಬಳಿ 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಕಳೆದ ಒಂದು ವರ್ಷದಲ್ಲಿ ಅವರ ಚರಾಸ್ತಿಯ ಮೊತ್ತ 26.13 ಲಕ್ಷ ರೂ. ಹೆಚ್ಚಳವಾಗಿದೆ. 2021ರ ಮಾರ್ಚ್‌ 31ರಂದು ಬಹಿರಂಗಪಡಿಸಿದ್ದ ಆಸ್ತಿ ವಿವರದಲ್ಲಿ, ಗಾಂಧಿನಗರದಲ್ಲಿದ್ದ ಆಸ್ತಿಯನ್ನೂ ಉಲ್ಲೇಖಿಸಲಾಗಿತ್ತು. ಅದು 1.1 ಕೋಟಿ ರೂ. ಬೆಲೆಬಾಳುತ್ತಿತ್ತು. ಅದಕ್ಕೆ ಮೋದಿ ಸೇರಿದಂತೆ ಒಟ್ಟು ಮೂವರ ಜಂಟಿ ಮಾಲೀಕತ್ವವಿತ್ತು. ಆದರೆ, ಈಗ ತಮ್ಮ ಪಾಲಿನ ಆ ಆಸ್ತಿಯನ್ನು ಮೋದಿ ದಾನವಾಗಿ ನೀಡಿರುವ ಕಾರಣ, ಅದೀಗ ಅವರ ಹೆಸರಲ್ಲಿಲ್ಲ.

ಇತರರ ಆಸ್ತಿ:
ಇನ್ನು ಮೋದಿ ಅವರ ಸಂಪುಟ ಸಹೋದ್ಯೋಗಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು 2.54 ಕೋಟಿ ರೂ.ಗಳ ಚರಾಸ್ತಿ ಮತ್ತು 2.97 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 29 ಸಂಪುಟ ಸಚಿವರ ಪೈಕಿ ಧರ್ಮೇಂದ್ರ ಪ್ರಧಾನ್‌, ಜ್ಯೋತಿರಾದಿತ್ಯ ಸಿಂದಿಯಾ, ಆರ್‌.ಕೆ. ಸಿಂಗ್‌, ಹರ್‌ದೀಪ್‌ ಸಿಂಗ್‌ ಪುರಿ, ಪರುಶೋತ್ತಮ ರೂಪಾಲ ಮತ್ತು ಜಿ. ಕಿಶನ್‌ ರೆಡ್ಡಿ ಹಾಗೂ ಜುಲೈನಲ್ಲಿ ರಾಜೀನಾಮೆ ನೀಡಿದ ಮಖಾ¤ರ್‌ ಅಬ್ಟಾಸ್‌ ನಖೀÌ ಈಗಾಗಲೇ ಆಸ್ತಿ ವಿವರವನ್ನು ಘೋಷಿಸಿದ್ದಾರೆ.

ಪ್ರಧಾನಿ ಮೋದಿಯ ಒಟ್ಟು ಆಸ್ತಿ – 2,23,82,504 ರೂ.
ಕೈಯ್ಯಲ್ಲಿರುವ ನಗದು – 35,250 ರೂ.
ಅಂಚೆ ಕಚೇರಿ ನ್ಯಾಷನಸ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌- 9,05,105 ರೂ.
ಜೀವವಿಮೆ ಮೊತ್ತ – 1,89,305
ನಾಲ್ಕು ಉಂಗುರಗಳು- 1.73 ಲಕ್ಷ ರೂ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next