Advertisement

ಜೂ.18ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಗೆ 100 ವರ್ಷ

12:25 AM Jun 16, 2022 | Team Udayavani |

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾ ಬೆನ್‌ ಮೋದಿ ಅವರು ಶನಿವಾರದಂದು ತಮ್ಮ 100ನೇ ವರ್ಷಕ್ಕೆ ಕಾಲಿಡಲಿದ್ದಾರೆ.

Advertisement

ಆ ದಿನದಂದು ಪ್ರಧಾನಿಯವರು ಹಿರಾ ಬೆನ್‌ ಅವರ ಮನೆಗೆ ಭೇಟಿ ನೀಡಲಿದ್ದು, ತಾಯಿಯಿಂದ ಆಶೀರ್ವಾದ ಪಡೆಯಲಿದ್ದಾರೆ ಎನ್ನಲಾಗಿದೆ.

“ಹಿರಾ ಬೆನ್‌ ಅವರು 1923ರ ಜೂ.18ರಂದು ಜನಿಸಿದ್ದರು. ಈಗ 100ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಆ ಹಿನ್ನೆಲೆಯಲ್ಲಿ ವಾದ್ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಮೋದಿ ಅವರ ತಮ್ಮ ಪಂಕಜ್‌ ಮೋದಿ ತಿಳಿಸಿದ್ದಾರೆ.

ಜೂ.18ರಂದು ಪ್ರಧಾನಿಯವರು ಗುಜರಾತ್‌ನ ಏಕದಿನ ಪ್ರವಾಸದಲ್ಲಿದ್ದಾರೆ.

Advertisement

ಹಾಗಾಗಿ ಅವರು ಅಂದು ತಾಯಿಯನ್ನು ಭೇಟಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next