Advertisement

ನಮ್ಮ ಜನಪರ ಕೆಲಸವನ್ನು ಕೋಮುವಾದ ಎನ್ನುವವರು ದೇಶವನ್ನು ವಿಭಜಿಸುತ್ತಿದ್ದಾರೆ : ಮೋದಿ

04:36 PM Apr 03, 2021 | Team Udayavani |

ಅಸ್ಸಾಂ : ದೇಶದ ಜನರ ಸೇವೆ ಮಾಡುವುದನ್ನು ಕೋಮುವಾದ ಎಂದು ಬಣ್ಣಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ  ವಾಗ್ದಾಳಿ ಮಾಡಿದ್ದಾರೆ.

Advertisement

ಅಸ್ಸಾಂ ನ ತಮುಲ್ಪುರ್ ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಪ್ರದಾನಿ, ಬಿಜೆಪಿ ದೇಶದ ಜನರ ಸೇವೆ ಮಾಡುತ್ತಿದೆ. ಅದನ್ನು ಕೆಲವರು ಕೋಮುವಾದ ಎಂದು ಹೇಳುತ್ತಿದ್ದಾರೆ. ನಾವು ದೇಶದ ಎಲ್ಲಾ ಜನರಿಗೆ ಕೆಲಸ ಮಾಡಿದರೆ ಅದನ್ನು ಕೋಮುವಾದ  ಎಂದು ಕರೆಯುತ್ತಿದ್ದಾರೆ. ಹಾಗೆ ಹೇಳುವವರು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ಗುಡುಗಿದ್ದಾರೆ.

ಓದಿ : ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್‌

ಈ ಬಾರಿ ದೇಶ 75ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಈ ಬಾರಿ ನೀವು ನಮಗೆ ಚಲಾಯಿಸುವ ಮತಗಳು 100 ನೇ ವರ್ಷ ಸ್ವಾತಂತ್ರ್ಯವನ್ನು ಆಚರಿಸುವಾಗ ಅಸ್ಸಾಂ ಎಷ್ಟು ಪ್ರಗತಿ ಸಾಧಿಸಿದೆ ಎಂಬುವದನ್ನು ತಿಳಿಸುತ್ತದೆ.

ಅಸ್ಸಾಂನಲ್ಲಿ ಟೀ ಗಾರ್ಡನ್ ನಿರ್ಮಿಸಲು ಕೇಂದ್ರ ಬಜೆಟ್ ನಲ್ಲಿ 1000 ಕೋಟಿ ಹೊರಡಿಸಲಾಗಿದೆ. ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ಧಿ ಹಾಗೂ ಎಲ್ಲರ ವಿಶ್ವಾಸ ನಮ್ಮ ಮೂಲ ಮಂತ್ರವಾಗಿದೆ. ಅಸ್ಸಾಂನ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೇಂದ್ರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Advertisement

ಇನ್ನು, ಅಸ್ಸಾಂನ ಉಗ್ರರಿಗೆ ಶರಣಾಗುವಂತೆ ಮನವಿ ಮಾಡಿದ್ದು, ಇದುವರೆಗೂ ಯಾರು ಶರಣಾಗಿಲ್ಲ ಅವರು ಶರಣಾಗಿ ಮುಖ್ಯವಾಹಿನಿಗೆ ಬಂದು ಆತ್ಮನಿರ್ಭರ್​ ಅಸ್ಸಾಂ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.

ಬಂದೂಕು ಹಿಡಿದು ನಿಮ್ಮ ಮಕ್ಕಳು ಕಾಡಿನಲ್ಲಿ ಜೀವನ ಮಾಡಬೇಕಿಲ್ಲ. ಯಾರದೋ ಗುಂಡಿಗೆ ಬಲಿಯಾಗಬೇಕಿಲ್ಲ. ನಿಮ್ಮ ಮಕ್ಕಳ ಕನಸನ್ನು ಈಡೇರಿಸುವುದಾಗಿ ಅಸ್ಸಾಂ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡುತ್ತೇನೆ. ಇದಕ್ಕೆ ಎನ್ ​ಡಿ ಎ ಸರ್ಕಾರ ಬದ್ಧವಾಗಿದೆ ಅವರು ಹೇಳಿದ್ದಾರೆ.

ಓದಿ :  ರಾಷ್ಟ್ರಪತಿ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆ-ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್

Advertisement

Udayavani is now on Telegram. Click here to join our channel and stay updated with the latest news.

Next