Advertisement

Congress Party ವಿರುದ್ಧ ಪ್ರಧಾನಿ ಟೀಕೆ ದೇಶದ ಅಭಿವೃದ್ಧಿಗೆ ಕೆಲವರ ಅಡ್ಡಿ

06:52 PM Aug 07, 2023 | Team Udayavani |

ನವದೆಹಲಿ: ಗ್ರಾಮಗಳಲ್ಲಿನ ಪಂಚಾಯಿತಿ ರಾಜ್‌ ವ್ಯವಸ್ಥೆಯ ಪ್ರಾಮುಖ್ಯತೆ ತಿಳಿದುಕೊಳ್ಳಲು ದೇಶಕ್ಕೆ ಸ್ವಾತಂತ್ರ್ಯ ಬಂದು ನಾಲ್ಕು ದಶಕಗಳು ಕಳೆದರೂ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಆರೋಪಿಸಿದ್ದಾರೆ.

Advertisement

ಹರ್ಯಾಣದ ಸೂರಜ್‌ಕುಂಡ್‌ನ‌ಲ್ಲಿ ಬಿಜೆಪಿಯ ಪಂಚಾಯಿತಿ ರಾಜ್‌ ಪರಿಷದ್‌ ಅನ್ನು ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಅವಧಿಯಲ್ಲಿ ಪಂಚಾಯಿತಿ ರಾಜ್‌ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿರಲಿಲ್ಲ. ಅವರು ಜಿಲ್ಲಾ ಪಂಚಾಯಿತಿ ವ್ಯವಸ್ಥೆಯನ್ನೇ ಕೈಬಿಟ್ಟಿದ್ದರು. ನಂತರ ಅದನ್ನು ಸೇರ್ಪಡೆ ಮಾಡಿದರು. ದೇಶದ 18 ಸಾವಿರ ಗ್ರಾಮಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವೇ ಲಭಿಸಿಲ್ಲ ಎಂದು ಹೇಳಿದ್ದಾರೆ.

ಕೆಲವರಿಂದ ಅಡ್ಡಿ:
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಪ್ರಯತ್ನಕ್ಕೆ ಕೆಲವರು ಕಲ್ಲು ಹಾಕಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ದೇಶವಾಸಿಗಳು ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣವನ್ನು ದೇಶದಿಂದ ತೊಲಗಿಸುವಂತೆ (ಕ್ವಿಟ್‌ ಇಂಡಿಯಾ) ಆಗ್ರಹಿಸುತ್ತಿದ್ದಾರೆ.

ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದಾರೆ. ನವದೆಹಲಿಯ ಭಾರತ್‌ ಮಂಟಪ್‌ನಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2014ಕ್ಕೂ ಮುಂಚೆ ಸುಮಾರು 25 ಸಾವಿರದಿಂದ 30 ಸಾವಿರ ಕೋಟಿ ರೂ. ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗುತ್ತಿದ್ದವು. ಈಗ ಅದು 1.30 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next