Advertisement

19ರಿಂದ PM ಮೋದಿ ತ್ರಿರಾಷ್ಟ್ರ ಪ್ರವಾಸ

11:39 PM May 16, 2023 | Team Udayavani |

ಹೊಸದಿಲ್ಲಿ: ಜಿ-7ಶೃಂಗಸಭೆ, ಚತುರ್ಭುಜ ರಾಷ್ಟ್ರಗಳ ಸಭೆ ಹಾಗೂ ಎಫ್ಐಪಿಐಸಿ ಸಭೆ ನಿಮಿತ್ತ ಮೇ19 ರಿಂದ ಪ್ರಧಾನಿ ಮೋದಿ ಅವರು ಜಪಾನ್‌ ಸಹಿತ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 19 ರಂದು ಜಪಾನ್‌ನ ಹಿರೋಶಿಮಾಗೆ ಭೇಟಿ ನೀಡಲಿರುವ ಮೋದಿ 21ರ ವರೆಗೆ ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸದಸ್ಯರಾಷ್ಟ್ರಗಳ ಜತೆಗೆ ವಿವಿಧ ಜಾಗತಿಕ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಬಳಿಕ ಮೇ 22ರಂದು ಪಪುವಾ ನ್ಯೂಗಿನಿ ಯಾಗೆ ಮೋದಿ ಭೇಟಿ ನೀಡಿ ಇಂಡಿಯಾ-ಪೆಸಿಫಿಕ್‌ ಐಲೆಂಡ್‌ ಕೋ-ಆಪರೇಶನ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಬಳಿಕ ಅದೇ ದಿನ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿರುವ ಪ್ರಧಾನಿ ಮೇ.24ರ ವರೆಗೆ ನಡೆಯಲಿರುವ ಕ್ವಾಡ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next