ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 16ರಂದು ನೆರೆಯ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಬುದ್ಧ ಪೌರ್ಣಿಮೆ ಹಿನ್ನೆಲೆಯಲ್ಲಿ ಸ್ವತಃ ನೇಪಾಳಿ ಪ್ರಧಾನಿ ಶೇರ್ ಬಹಾದ್ದೂರ್ ದೇವುಬ ಅವರೇ ಮೋದಿಗೆ ಆಹ್ವಾನ ನೀಡಿದ್ದಾರೆ.
Advertisement
2014ರ ನಂತರ ನೇಪಾಳಕ್ಕೆ ಮೋದಿಯ 5ನೇ ಭೇಟಿ ಇದಾಗಿರಲಿದೆ. ಬುದ್ಧ ಹುಟ್ಟಿದ ಲುಂಬಿನಿ ವನದಲ್ಲಿ ಬುದ್ಧ ಜಯಂತಿಯ ಆಚರಣೆ ನಡೆಯಲಿದೆ.
ಅಲ್ಲಿ ಅವರು ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರವೊಂದಕ್ಕೆ ಶಿಲಾನ್ಯಾಸವೊಂದನ್ನೂ ನೆರವೇರಿಸಲಿದ್ದಾರೆ. ಲುಂಬಿನಿಯಲ್ಲೇ ಇರುವ ಜಾಗೃತ ದೇವೀ ಕ್ಷೇತ್ರ ಮಹಾದೇವಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.