Advertisement

ಜೂ.26ರಿಂದ 28ರವರೆಗೆ ಪ್ರಧಾನಿ ಮೋದಿ ಜರ್ಮನಿ, ಯುಎಇ ಪ್ರವಾಸ

07:24 PM Jun 22, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂ.26ರಿಂದ 28ರವರೆಗೆ ಜರ್ಮನಿ ಮತ್ತು ಯುಎಇ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಈ ಬಗ್ಗೆ ಬುಧವಾರ ನವದೆಹಲಿಯಲ್ಲಿ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಜರ್ಮನಿಯ ಶೋಲ್ಸ್‌ ಎಲ್ಮು ಎಂಬಲ್ಲಿ ನಡೆಯಲಿರುವ ಜಿ7 ರಾಷ್ಟ್ರಗಳ ಸಮ್ಮೇಳನಕ್ಕಾಗಿ ಪ್ರಧಾನಿ ಜೂ.26 ಮತ್ತು ಜೂ.27ರಂದು ತೆರಳಲಿದ್ದಾರೆ.

ಅಲ್ಲಿನ ಪ್ರಧಾನಿ ಒಲಾಫ್ ಶೋಲ್ಜ್ ಅವರ ಆಹ್ವಾನದಂತೆ ಪ್ರಧಾನಿ ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದ ನಟಿಗೆ ಜಾಮೀನು; ಜೈಲಿನಿಂದ ಬಿಡುಗಡೆ

ಬಳಿಕ ಜೂ.28ರಂದು ಯುಎಇಗೆ ತೆರಳಿ ಇತ್ತೀಚೆಗೆ ನಿಧನರಾಗಿರುವ ಶೇಖ್‌ ಖಲೀಫಾ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next