ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆಯಲಿರುವ “ಸಂವಿಧಾನ ದಿನ’ದ ಕಾರ್ಯ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಅವರು ನೂತನ “ಇ-ಕೋರ್ಟ್’ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಇದರ ಭಾಗವಾಗಿ “ವರ್ಚುವಲ್ ಜಸ್ಟಿಸ್ ಕ್ಲಾಕ್’, “ಜಸ್ಟ್ಐಎಸ್’, ಮೊಬೈಲ್ ಆ್ಯಪ್ 2.0, ಡಿಜಿಟಲ್ ಕೋರ್ಟ್ ಮತ್ತು “”S3WaaS’ ವೆಬ್ಸೈಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೇರಿದಂತೆ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳು ಉಪಸ್ಥಿತರಿರುವರು ಎಂದು ಮೂಲಗಳು ತಿಳಿಸಿವೆ.
1949ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀ ಕರಿಸಿದ ಸ್ಮರಣಾರ್ಥ 2015ರ ಅನಂತರ ನ. 26 ರಂದು “ಸಂವಿಧಾನ ದಿನ’ವನ್ನಾಗಿ ಆಚರಿಸ ಲಾಗುತ್ತಿದೆ. ಇದಕ್ಕು ಮೊದಲು ಈ ದಿನವನ್ನು “ಕಾನೂನು ದಿನ’ ಎಂದು ಆಚರಿಸಲಾಗುತಿತ್ತು.
Related Articles
2 ವೆಬ್ಸೈಟ್ ಅನಾವರಣ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಶುಕ್ರವಾರ “ಸಂವಿಧಾನ ದಿನ’ ನಿಮಿತ್ತ 2 ವೆಬ್ಸೈಟ್ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಸಂವಿಧಾನದ ಪೀಠಿಕೆ ಓದುವಿಕೆಗೆ https://readpreamble.nic.in/ಎಂಬ ವೆಬ್ಸೈಟ್, ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳಿಗಾಗಿ https://constitutionquiz.nic.in/ಎಂಬ ಮತ್ತೊಂದು ವೆಬ್ಸೈಟ್ ಅನಾವರಣಗೊಳಿಸಲಾಗಿದೆ.
ಕನ್ನಡದ ಸಹಿತ 22 ಭಾಷೆಗಳಲ್ಲಿ ಪೀಠಿಕೆ ಓದಲು ಅವಕಾಶವಿದೆ. ಅದಕ್ಕಾಗಿ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿವರ ನೀಡಬೇಕಾಗುತ್ತದೆ.