Advertisement

PM Modi: ಶಿವ ದೇಗುಲ ವಿವಾದದ ಮಧ್ಯೆ ಅಜ್ಮೇರ್ ದರ್ಗಾಗೆ ಮೋದಿ ಚಾದರ್‌ ಅರ್ಪಣೆ

12:04 AM Jan 03, 2025 | Team Udayavani |

ನವದೆಹಲಿ: ವಿವಾದಗಳ ನಡುವೆಯೇ ರಾಜಸ್ಥಾನದ ಅಜ್ಮೇರ್ ದರ್ಗಾಗೆ ವಾಡಿಕೆಯಂತೆ ಪ್ರಧಾನಿ ಮೋದಿ ಪವಿತ್ರ ಚಾದರ್‌ ಅರ್ಪಿಸಿದ್ದಾರೆ.

Advertisement

ಈಗಾಗಲೇ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರಿಗೆ ಮೋದಿ ಚಾದರ್‌ ಅನ್ನು ಹಸ್ತಾಂತರಿಸಿದ್ದು, ಪ್ರಧಾನಿ ಪರವಾಗಿ ಶನಿವಾರ ಅಜ್ಮೇರ್ ಷರೀಫ್ ದರ್ಗಾಗೆ ರಿಜಿಜು ಭೇಟಿ ನೀಡಿ ಚಾದರ್‌ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ ಉರೂಸ್‌ ಅಂಗವಾಗಿ ಈ ಚಾದರ್‌ ಅರ್ಪಿಸಲಾಗುತ್ತದೆ. ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಿಂದಲೂ ಮೋದಿ ಈ ಚಾದರ್‌ ನೀಡುತ್ತಾ ಬಂದಿದ್ದಾರೆ. ಇದೀಗ 11ನೇ ಬಾರಿ ಅವರು ಚಾದರ್‌ ನೀಡುತ್ತಿದ್ದಾರೆ. ಈ ದರ್ಗಾದ ಕೆಳಗೆ ಶಿವನ ದೇವಾಲಯವಿದ್ದು ಈ ಬಗ್ಗೆ ಸಮೀಕ್ಷೆ ನಡೆಸಬೇಕೆಂದು ಅರ್ಜಿದಾರರೊಬ್ಬರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಭಾರೀ ಚರ್ಚೆಗೆ ನಾಂದಿ ಹಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next