Advertisement

ಹುಬ್ಬಳ್ಳಿಗೆ ಇಂದು ಮೋದಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ

12:56 AM Jan 12, 2023 | Team Udayavani |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರು ವಾರ ಹುಬ್ಬಳ್ಳಿಗೆ ಆಗಮಿಸಲಿದ್ದು, ಸಂಜೆ 4ಕ್ಕೆ ಇಲ್ಲಿನ ರೈಲ್ವೇ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುವರು.

Advertisement

ಧಾರವಾಡದಲ್ಲಿ ಜ.12-16ರ ವರೆಗೆ ಉತ್ಸವ ನಡೆಯಲಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿಯವರ ಪಾಲ್ಗೊಳ್ಳುವಿಕೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಗುರುವಾರ ಮಧ್ಯಾಹ್ನ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಅವರು, ಸಮಾರಂಭ ಸ್ಥಳ ರೈಲ್ವೇ ಮೈದಾನದವರೆಗೆ ಸುಮಾರು 8 ಕಿ.ಮೀ. ರೋಡ್‌ ಶೋ ನಡೆ ಸುವರು. ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವ ಜನಿಕರಿಗೆ ನಿಂತು ವೀಕ್ಷಿಸಲು ಅವ ಕಾಶ ನೀಡಲಾಗಿದೆ.

ಪ್ರಧಾನಿ ಆಗಮನ ಹಾಗೂ ಯುವಜನೋತ್ಸವ ಹಿನ್ನೆಲೆಯಲ್ಲಿ ಅವಳಿನಗರ ಶೃಂಗಾರಗೊಂಡಿದ್ದು, ಪ್ರಮುಖ ವೃತ್ತ-ರಸ್ತೆಗಳಲ್ಲಿ ಬ್ಯಾನರ್‌-ಫ್ಲೆಕ್ಸ್‌ ಗಳು ರಾರಾಜಿಸುತ್ತಿವೆ.

ಎಷ್ಟು ಜನ ಭಾಗಿ?
ಉದ್ಘಾಟನ ಕಾರ್ಯಕ್ರಮದಲ್ಲಿ ಪ್ರಧಾನಿ, ಕೇಂದ್ರ ಸಚಿವರು ಹಾಗೂ ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 25 ಜನ ಗಣ್ಯರು ಭಾಗವಹಿಸುವರು. ವಿವಿಧ ರಾಜ್ಯಗಳ ಸುಮಾರು 5,700ಕ್ಕೂ ಹೆಚ್ಚು ಮಂದಿ ಯುವಜನರಲ್ಲದೇ, ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ ಸುಮಾರು 25 ಸಾವಿರ ಮಂದಿ ಯುವಜನರಿಗೂ ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿದೆ.

Advertisement

ಏನೇನು ಕಾರ್ಯಕ್ರಮ?
ಜಾನಪದ ನೃತ್ಯ, ಯುವ ಸಮ್ಮೇಳನ, ದೇಶೀಯ ಕ್ರೀಡೆಗಳು, ಆಹಾರ ಮೇಳ, ಜಾನಪದ ಹಾಡುಗಳ ಗಾಯನ, ಜಲ ಸಾಹಸ ಕ್ರೀಡೆಗಳು, ಯುವ ಕಲಾವಿದರ ಶಿಬಿರ, ಯುವ ಕೃತಿ ವಿಶೇಷ ಕಾರ್ಯ ಕ್ರಮ, ಯೋಗ ಥಾನ್‌, ಸಾಹಸ ಕ್ರೀಡೆ ಕಾರ್ಯಾಗಾರ ವಿವಿಧ ಕಾಲೇಜು, ರಂಗಮಂದಿರ ಹಾಗೂ ಕ್ರೀಡಾ ಮೈದಾನ ಗಳಲ್ಲಿ ನಡೆಯ ಲಿದೆ. ಜ. 16 ರಂದು ಕೆಸಿಡಿ ಕಾಲೇಜಿ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next