Advertisement

ಭಾರತದ ಅತಿದೊಡ್ಡ ಡ್ರೋನ್‌ ಫೆಸ್ಟಿವಲ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

07:50 PM May 26, 2022 | Team Udayavani |

ನವದೆಹಲಿ : ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಲಿದ್ದಾರೆ.

Advertisement

ಜೊತೆಗೆ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್‌ ಹಾರಾಟವನ್ನೂ ಅವರು ವೀಕ್ಷಿಸಲಿದ್ದಾರೆ.

ಭಾರತ್‌ ಡ್ರೋನ್ ಮಹೋತ್ಸವ 2022 ಎರಡು ದಿನದ ಕಾರ್ಯಕ್ರಮವಾಗಿದ್ದು, ಮೇ 27 ಮತ್ತು 28 ರಂದು ನಡೆಯಲಿದೆ. ಮೇ 27 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ, ಡ್ರೋನ್ ಹಾರಾಟದ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ ಮತ್ತು ಡ್ರೋನ್‌ ಪ್ರದರ್ಶನ ಕೇಂದ್ರದಲ್ಲಿ ಸ್ಟಾರ್ಟಪ್‌ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.

ಸರ್ಕಾರಿ ಅಧಿಕಾರಿಗಳು, ವಿದೇಶಿ ಪರಿಣಿತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟಪ್‌ಗಳು ಸೇರಿದಂತೆ 1600 ನಿಯೋಗಗಳು ಈ ಹಬ್ಬದಲ್ಲಿ ಭಾಗವಹಿಸಲಿವೆ.

Advertisement

70 ಕ್ಕೂ ಹೆಚ್ಚು ಪ್ರದರ್ಶನಕಾರರು ಪ್ರದರ್ಶನದಲ್ಲಿ ವಿವಿಧ ಬಳಕೆಯ ವಿಧಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡ್ರೋನ್ ಪೈಲಟ್‌ ಪ್ರಮಾಣಪತ್ರಗಳು, ಉತ್ಪನ್ನ ಬಿಡುಗಡೆಗಳು, ಪ್ಯಾನೆಲ್ ಚರ್ಚೆಗಳು, ಹಾರಾಟ ಪ್ರದರ್ಶನಗಳು, ಭಾರತದಲ್ಲೇ ತಯಾರಿಸಿದ ಡ್ರೋನ್‌ ಟ್ಯಾಕ್ಸಿ ಪ್ರೊಟೊಟೈಪ್‌ ಪ್ರದರ್ಶನ ಈ ಮಹೋತ್ಸವದಲ್ಲಿ ಇರಲಿದೆ.

ಇದನ್ನೂ ಓದಿ : ಡಿಕೆಶಿ ವಿರುದ್ಧ ಚಾರ್ಜ್ ಶೀಟ್; ಕಾನೂನು ತನ್ನ ಕೆಲಸ ಮಾಡುತ್ತದೆ: ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next