Advertisement

ಜ.13ರಂದು ವಿಶ್ವದ ಅತಿ ಉದ್ದದ ನದೀಯಾನಕ್ಕೆ ಪ್ರಧಾನಿ ಮೋದಿ ಚಾಲನೆ

10:04 PM Jan 11, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಅತಿ ಉದ್ದದ ನದೀಯಾನವನ್ನು ಜ.13ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ.

Advertisement

ಎಂವಿ ಗಂಗಾ ವಿಲಾಸ ಹೆಸರಿನ ಈ ಯಾತ್ರೆ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ 27 ನದೀಮಾರ್ಗಗಳ ಮೂಲಕ ಹಾದುಹೋಗಲಿದೆ. ಹಾಗೆಯೇ ವಾರಾಣಸಿಯ ಗಂಗಾನದಿ ತಟಾಕದಲ್ಲಿರುವ “ಟೆಂಟ್‌ ಸಿಟಿ’ಯನ್ನು, 1000 ಕೋಟಿ ರೂ. ವೆಚ್ಚದ ಒಳನಾಡು ಜಲಮಾರ್ಗಗಳ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಎಂವಿ ಗಂಗಾವಿಲಾಸ ನದೀಯಾನ ಒಟ್ಟು 3200 ಕಿ.ಮೀ. ದೂರವನ್ನು 51 ದಿನಗಳಲ್ಲಿ ಕ್ರಮಿಸುತ್ತದೆ. ವಾರಾಣಾಸಿಯಿಂದ ಶುರುವಾಗುವ ಈ ಯಾನ ಬಾಂಗ್ಲಾದೇಶವನ್ನು ಹಾದು ಅಸ್ಸಾಮಿನ ದಿಬ್ರುಗಢದಲ್ಲಿ ಮುಕ್ತಾಯ ಕಾಣುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next