ನವ ದೆಹಲಿ : ತಮಿಳುನಾಡಿನ ಡಾ. ಎಮ್ ಜಿ ಆರ್ ಮೆಡಿಕಲ್ ಯೂನಿವರ್ಸಿಟಿಯ 33ನೇ ಘಟಿಕೋತ್ಸವದಲ್ಲಿ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ.
ನಾಳೆ(ಶುಕ್ರವಾರ) ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪದವಿ, ಡಿಪ್ಲೋಮಾ ಮುಗಿಸಿದ ಸುಮಾರು 17, 591 ವಿದ್ಯಾರ್ಥಿಗಳು ಈ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಓದಿ : ಖಾಸಗಿ ಬ್ಯಾಂಕುಗಳು ಈಗ ಸರ್ಕಾರಿ ವ್ಯವಹಾರವನ್ನು ನಿರ್ವಹಿಸಬಹುದು : ನಿರ್ಮಲಾ ಸೀತಾರಾಮನ್
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಮ್ ಜಿ ರಾಮಚಂದ್ರನ್ ಅವರ ಹೆಸರಿನಲ್ಲಿರುವ ಈ ವಿಶ್ವವಿದ್ಯಾಲಯ 686 ಅಂಗ ಸಂಸ್ಥೆಯನ್ನು ಹೊಂದಿದೆ.
41 ಮೆಡಿಕಲ್ ಕಾಲೇಜುಗಳು, 19 ಡೆಂಟಲ್ ಕಾಲೇಜುಗಳು, 48 ಆಯುಷ್ ಕಾಲೇಜುಗಳು, 199 ನರ್ಸಿಂಗ್ ಕಾಲೇಜುಗಳು, 81 ಫಾರ್ಮಸಿ ಕಾಲೇಜುಗಳು ಸೇರಿ ಹಲವು ಸಂಸ್ಥೆಗಳನ್ನು ಹೊಂದಿವೆ.
ಓದಿ : ಹಿರೇನಾಗವಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್