ಕೊಲ್ಕತ್ತಾ : ಪ್ರಧಾನಿ ಮೋದಿ ಇಂದು(ಭಾನುವಾರ) ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್ ನಲ್ಲಿ ಪಶ್ಚಿಮ ಬಂಗಾಳದ ಚುನಾವಣಾ ಕಹಳೆಯನ್ನು ಊದಿದ್ದಾರೆ. ಭಾಷಣದುದ್ದಕ್ಕೂ ಬಂಗಾಳದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಮೋದಿ, ದೀದಿ ಸರ್ಕಾರವನ್ನು ಟೀಕಿಸಿದ್ದಾರೆ.
ಭಾಷಣ ಶುರು ಮಾಡುತ್ತಿದ್ದಂತೆ ಮಾತನಾಡಿದ ಮೋದಿ, ಈ ಹಿಂದೆ ಎಂದೂ ಕೂಡ ಇಷ್ಟು ಜನರನ್ನು ಹೊಂದಿದ ರ್ಯಾಲಿಯನ್ನು ಕಂಡಿರಲಿಲ್ಲ. ಬಂಗಾಳದ ಅಭಿವೃದ್ಧಿಯ ಭರವಸೆ ನೀಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಹೂಡಿಕೆ ಹೆಚ್ಚಿಸಲು, ಬಂಗಾಳದ ಸಂಸ್ಕೃತಿ ಕಾಪಾಡಲು ಹಾಗೂ ಬದಲಾವಣೆಯನ್ನು ತರುವ ಭರವಸೆ ನೀಡುತ್ತೇನೆ ಎಂದರು.
ಮುಂದಿನ 25 ವರ್ಷಗಳು ಬಂಗಾಳದ ಅಭಿವೃದ್ಧಿ ತುಂಬಾ ಮುಖ್ಯವಾಗಿವೆ. ಮುಂದಿನ 5 ವರ್ಷದ ಬೆಳವಣಿಗೆ ಮುಂದಿನ 25 ವರ್ಷಗಳ ನಂತರದ ಅಭಿವೃದ್ಧಿಯನ್ನು ನಿರ್ಧರಿಸಲಿದೆ ಎಂದಿದ್ದಾರೆ.
ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಬಂಗಾಳಕ್ಕೆ ಶಾಂತಿ, ಅಭಿವೃದ್ಧಿ, ಸ್ವತಂತ್ರ ಬೇಕಿದೆ. 2047ರ ಹೊತ್ತಿಗೆ ದೇಶವನ್ನು ಮುನ್ನಡೆಸುವಂತಹ ಬಂಗಾಳವಾಗಿ ಹೊರಹೊಮ್ಮಲಿದೆ ಎಂದರು.
ಮಮತಾ ಬ್ಯಾನರ್ಜಿಯನ್ನು ವ್ಯಂಗ್ಯ ಮಾಡಿದ ಮೋದಿ, ಬಂಗಾಳದ ಜನರು ನಿಮ್ಮನ್ನು ‘ದೀದಿ’ ಎಂದೇ ನಂಬಿದ್ದಾರೆ, ಆದರೆ ನೀವೇಕೆ ಅತ್ತೆಯಾಗಿಯೇ ಉಳಿದಿರಿ? ಬಂಗಾಳದ ಜನರು ನಿಮ್ಮಿಂದು ಇದೊಂದು ಪ್ರಶ್ನೆಯನ್ನಷ್ಟೇ ಕೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.