Advertisement

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

02:35 PM Jul 03, 2024 | Team Udayavani |

ಹೊಸದಿಲ್ಲಿ: NEET-UG paper leak case ಕುರಿತು ಮಾತನಾಡಿದ ಪ್ರಧಾನಿ ಮೋದಿ, ಯುವಕರ ಭವಿಷ್ಯದೊಂದಿಗೆ ಆಟವಾಡುವವರನ್ನು ಸರಕಾರ ಬಿಡುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ, ಸರಕಾರ ಮಧ್ಯಪ್ರವೇಶಿಸುವುದಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ದೇಶದ ಯುವಜನರ ಭವಿಷ್ಯದೊಂದಿಗೆ ರಾಜಕೀಯ ಮಾಡುತ್ತಿವೆ’ ಎಂದು ಆರೋಪಿಸಿದರು.

Advertisement

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಿಸಿ ವಿಪಕ್ಷಗಳ ಮೇಲೆ ಕಿಡಿ ಕಾರಿದರು.

ಮಣಿಪುರ ವಿಚಾರದಲ್ಲಿ ಪ್ರಧಾನಿ ಪ್ರತಿಕ್ರಿಯೆ

ಪ್ರತಿಪಕ್ಷಗಳ ನಿರಂತರ ಪ್ರಮುಖ ಬೇಡಿಕೆಯಾದ ಮಣಿಪುರದ ಜನಾಂಗೀಯ ಕಲಹದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ‘ಅಲ್ಲಿ ಹಿಂಸಾಚಾರದ ಘಟನೆಗಳು ಕಡಿಮೆಯಾಗುತ್ತಿವೆ. ಮಣಿಪುರದಲ್ಲಿ 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಮತ್ತು 11,000 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಮಣಿಪುರವನ್ನು ಸಹಜ ಸ್ಥಿತಿ ತರಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.ಮಣಿಪುರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಪ್ರತಿಪಕ್ಷಗಳು ನಿಲ್ಲಿಸಬೇಕು.ಮುಂದೊಂದು ದಿನ ಮಣಿಪುರ ನಿಮ್ಮನ್ನು ತಿರಸ್ಕರಿಸುತ್ತದೆ’ ಎಂದರು.

ಇದನ್ನೂ ಓದಿ: Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Advertisement

’60 ವರ್ಷಗಳ ನಂತರ ಸರಕಾರವೊಂದು ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರಕಾರ 10 ವರ್ಷ ಪೂರೈಸಿದೆ, ಇನ್ನೂ 20 ವರ್ಷ ಬಾಕಿ ಇದೆ, ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.

ಪ್ರಧಾನಮಂತ್ರಿಯವರು ರಾಜ್ಯಸಭೆಯಲ್ಲಿ  ಭಾಷಣದ ಮಾಡುವ ವೇಳೆ, ಲೋಕಸಭೆಯಲ್ಲಿ ಮಾಡಿದದಂತೆ ಪ್ರತಿಪಕ್ಷದ ಸಂಸದರು ನಿರಂತರ ಘೋಷಣೆಗಳನ್ನು ಕೂಗಿ ವಿರೋಧ ಪಕ್ಷದ ನಾಯಕ ಮಾತನಾಡಲಿ ಎಂದು ಗದ್ದಲ ಉಂಟು ಮಾಡಿದರು.

‘‘ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತೇವೆ ಎಂದು ಲೋಕಸಭೆಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.ಈಗ ಸಂವಿಧಾನದ ಪ್ರತಿಯನ್ನು ಹಿಡಿದು ಕುಣಿಯುತ್ತಿರುವವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನುವುದು ನನಗೆ ಆಶ್ಚರ್ಯ ತಂದಿದೆ” ಎಂದರು.

‘ನಾವು ಸಂವಿಧಾನವನ್ನು ರಕ್ಷಿಸಬಹುದು ಎಂದು ತಿಳಿದಿರುವ ಮಾತ್ರಕ್ಕೆ ಜನರು ಎನ್‌ಡಿಎಗೆ ಮತ ಹಾಕಿದ್ದಾರೆ’ಎಂದು ಪ್ರಧಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next