Advertisement

ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟುಕೊಟ್ಟ ಪ್ರಧಾನಿ ಮೋದಿ-ವಿಡಿಯೋ ವೈರಲ್

08:25 PM Sep 30, 2022 | Team Udayavani |

ಗಾಂಧಿನಗರ: ಪ್ರಧಾನಿ ಮೋದಿ ಅವರು ಸಂಚರಿಸುತ್ತಿದ್ದ ಕಾರು, ಆ್ಯಂಬುಲೆನ್ಸ್‌ ಒಂದಕ್ಕೆ ದಾರಿ ಬಿಟ್ಟುಕೊಟ್ಟಿರುವ ಘಟನೆ ಶುಕ್ರವಾರ ಗುಜರಾತ್‌ನಲ್ಲಿ ನಡೆದಿದೆ.

Advertisement

ಅಹಮದಾಬಾದ್‌ನಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಅವರು ಅಲ್ಲಿಂದ ಗಾಂಧಿನಗರದ ರಾಜ ಭವನದತ್ತ ಹೊರಟಿದ್ದರು.

ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪ್ರಧಾನಿ ವಾಹನಕ್ಕೆ ದಾರಿ ಮಾಡಿಕೊಡಲಾಗಿತ್ತು. ಈ ವೇಳೆ ಆ್ಯಂಬುಲೆನ್ಸ್‌ ಒಂದು ಬಂದಿದ್ದು, ಅದಕ್ಕೆ ಪ್ರಧಾನಿ ಅವರ ರಕ್ಷಣೆಗಿದ್ದ ವಾಹನಗಳು ದಾರಿ ಮಾಡಿಕೊಟ್ಟಿವೆ.


ಕಾರುಗಳು ರಸ್ತೆಯ ಎಡಭಾಗಕ್ಕೆ ತೆರಳಿ ಬಲ ಭಾಗದಲ್ಲಿ ಆ್ಯಂಬುಲೆನ್ಸ್‌ಗೆ ಜಾಗ ಕೊಟ್ಟಿವೆ. ಈ ದೃಶ್ಯವಿರುವ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next