Advertisement

ಹೈಬ್ರಿಡ್‌ ಸಿಸ್ಟಂ ಬಳಸಿ: ಪ್ರಧಾನಿ ಮೋದಿ ಕರೆ

01:40 AM May 08, 2022 | Team Udayavani |

ಹೊಸದಿಲ್ಲಿ: ಮಕ್ಕಳು ತಂತ್ರಜ್ಞಾನಕ್ಕೆ ಅತೀ ಹೆಚ್ಚು ತೆರೆದು ಕೊಳ್ಳುವುದನ್ನು ತಪ್ಪಿಸಲು ಶಾಲೆಗಳಲ್ಲಿ ಆಫ್ಲೈನ್‌ ಮತ್ತು ಆನ್‌ಲೈನ್‌ ಶಿಕ್ಷಣ ಇರುವಂತಹ ಹೈಬ್ರಿಡ್‌ ಶಿಕ್ಷಣ ನೀತಿ ಯನ್ನು ಪಾಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ಕೊಟ್ಟಿದ್ದಾರೆ.

Advertisement

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಕೆಯ ಪರಿಶೀಲನ ಸಭೆಯಲ್ಲಿ ಭಾಗವಹಿ ಸಿದ ಪ್ರಧಾನಿ ಈ ಅಭಿಪ್ರಾಯ ಮಂಡಿಸಿದ್ದಾರೆ.

ಕೊರೊನಾ ಸಮಯದಲ್ಲಿ ಮಕ್ಕಳು ಶಿಕ್ಷಣದಿಂದ ದೂರಾಗದಂತೆ ನೋಡಿಕೊಳ್ಳಲೆಂದು ಆನ್‌ಲೈನ್‌, ತೆರೆದ ಶಿಕ್ಷಣ ಮತ್ತು ಮಲ್ಟಿ ಮೋಡಲ್‌ ಶಿಕ್ಷಣಕ್ಕೆ ಒತ್ತು ನೀಡಲಾಯಿತು.

ಇದರಿಂದಾಗಿ ಹಳ್ಳಿ ಹಳ್ಳಿಯ ಮಕ್ಕಳಿಗೂ ಶಿಕ್ಷಣ ಲಭ್ಯವಾಗುವಂತಾಯಿತು ಎಂದು ಮೋದಿ ಹೇಳಿದ್ದಾರೆ. ಎನ್‌ಪಿಯ ಮಲ್ಟಿ ಪಲ್‌ ಎಂಟ್ರೊ-ಎಕ್ಸಿಟ್‌ ಸಿಸ್ಟಂನಿಂದ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದಂತೆ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next