Advertisement

ಜಿಲ್ಲಾ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆ ಬಲಗೊಳಿಸಿ: ಮೋದಿ

11:31 PM Jan 09, 2022 | Team Udayavani |

ಹೊಸದಿಲ್ಲಿ: “ಹೆಚ್ಚುತ್ತಿರುವ ಕೊರೊನಾ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟ ಮತ್ತು ಅದಕ್ಕಿಂತ ಕೆಳ ಹಂತದ ವ್ಯವಸ್ಥೆಯಲ್ಲಿ ಆರೋಗ್ಯ ಮೂಲಸೌಕರ್ಯ ಬಲಪಡಿಸಬೇಕು.’

Advertisement

ಇದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಲಹೆ. ಕೊರೊನಾ ಸ್ಥಿತಿಗತಿ ಕುರಿತು ಪರಿಶೀಲಿಸಲು ಹೊಸದಿಲ್ಲಿಯಲ್ಲಿ ರವಿವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮೋದಿ, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಅಂತರ ಪಾಲಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮ

ಗಳನ್ನು ಕೈಗೊಳ್ಳಬೇಕು. ಲಸಿಕೆ ಹಾಕಿಸುವುದಕ್ಕೆ ಆದ್ಯತೆ, ಸೋಂಕಿನ ವಿಚಾರದಲ್ಲಿ ನಿರಂತರ ಸಂಶೋಧನೆ, ಸೂಕ್ತ ಔಷಧೋಪಚಾರಗಳ ಬಗ್ಗೆ ಅಗತ್ಯವಾಗಿ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇಂದಿನಿಂದ ಮುನ್ನೆಚ್ಚರಿಕೆ ಡೋಸ್‌
ಇದೇ ವೇಳೆ, ದೇಶಾದ್ಯಂತ ಸೋಮವಾರ ದಿಂದ ಆರೋಗ್ಯ, ಮುಂಚೂಣಿ ಕಾರ್ಯ ಕರ್ತರು ಹಾಗೂ ಇತರ ಆರೋಗ್ಯ ಸಮಸ್ಯೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ.

ಇದನ್ನೂ ಓದಿ:ರಸ್ತೆ ಬಂದ್‌ ಮಾಡಿ ಮಹಾರಾಷ್ಟ್ರ ಸಂಪರ್ಕ ಕಡಿತ; ಕರ್ಫ್ಯೂ ಯಶಸ್ವಿ

Advertisement

ಒಂದೇ ದಿನ 1.59 ಲಕ್ಷ ಪ್ರಕರಣ
ದೇಶದಲ್ಲಿ ಶನಿವಾರದಿಂದ ರವಿವಾರದ ಅವಧಿಯಲ್ಲಿ 1,59,632 ಹೊಸ ಸೋಂಕು ಪ್ರಕರಣ ದೃಢಪಟ್ಟಿವೆ. ಇದೇ ಅವಧಿಯಲ್ಲಿ 327 ಮಂದಿ ಅಸುನೀಗಿದ್ದಾರೆ. 224 ದಿನಗಳಲ್ಲೇ ಪತ್ತೆಯಾದ ಗರಿಷ್ಠ ಪ್ರಕರಣ ಇದಾಗಿದೆ. ಇನ್ನು ಒಂದೇ ದಿನ ದೇಶಾದ್ಯಂತ 552

ಹೊಸ ಒಮಿಕ್ರಾನ್‌ ಪ್ರಕರಣಗಳು ದೃಢಪಟ್ಟು, ಒಟ್ಟಾರೆ ಸೋಂಕಿತರ ಸಂಖ್ಯೆ 3,623ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯದ ಪಾಸಿಟಿವಿಟಿ ದರ ಶೇ.6.33ಕ್ಕೆ
ಬೆಂಗಳೂರು:  ರಾಜ್ಯದಲ್ಲಿ ಕೊರೊನಾ 3ನೇ ಅಲೆ ತೀವ್ರಗೊಂಡಿದ್ದು, ಪ್ರಕರಣ ಗಳ ಸಂಖ್ಯೆ 10 ದಿನಗಳಲ್ಲಿ 41,000ರ ಗಡಿ ದಾಟಿದೆ. ರವಿವಾರ 12,000 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ರಾಜ್ಯದ ಪಾಸಿಟಿವಿಟಿ ದರ ಶೇ. 6.33ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next