Advertisement

ಸಂಪುಟ ಸದಸ್ಯರ ಸಾಧನೆ ಪರಿಶೀಲಿಸಿದ ಪ್ರಧಾನಿ ಮೋದಿ

10:27 AM Dec 22, 2019 | Team Udayavani |

ನವದೆಹಲಿ: ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿ ಆರು ತಿಂಗಳು ಪೂರ್ಣಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪೂರ್ಣ ಪ್ರಮಾಣದ ಸಂಪುಟ ಸದಸ್ಯರ ಸಾಧನೆ ಪರಾಮರ್ಶೆ ನಡೆಸಿದರು. ದಿನವಿಡೀ ನಡೆದ ಸಭೆಯಲ್ಲಿ ವಿವಿಧ ಸಚಿವಾಲಯಗಳ ಸಚಿವರು ತಮ್ಮ ತಮ್ಮ ಸಾಧನೆಗಳ ಬಗೆಗಿನ ಮಾಹಿತಿ ಪ್ರಾತ್ಯಕ್ಷಿಕೆಯನ್ನು ಪ್ರಧಾನಿಗೆ ನೀಡಿದರು.

Advertisement

ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿ ಹೆಚ್ಚಿನ ಒತ್ತು ನೀಡಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ಕೋಷ್ಠಕ (ಎನ್‌ಆರ್‌ಸಿ) ದೇಶಾದ್ಯಂತ ಜಾರಿಗೆ ತರುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೇ ಸಚಿವರ ಸಾಧನೆ ಮೌಲ್ಯಮಾಪನ ನಡೆದಿದೆ. ಹಲವು ವಾರಗಳಿಂದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಂಪುಟ ಸಭೆಯ ಮೂಲಕ ವಿವಿಧ ಸಚಿವಾಲಯಗಳು ಸಾಧಿಸಿದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು.

ಸಾಮಾನ್ಯವಾಗಿ ಮಂತ್ರಿ ಮಂಡಲ ಸಭೆಯ ಬಳಿಕ ಸಚಿವ ಸಂಪುಟ ಸಭೆ ನಡೆಯುತ್ತದೆ. ಈ ಬಾರಿ ಅದನ್ನು ಪ್ರತ್ಯೇಕವಾಗಿ ನಡೆಸಲಾಗಿದೆ. ಡಿ.24ರಂದು ವಾರದ ಸಂಪುಟ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next