ನವ ದೆಹಲಿ : ಬಂಗಾಳ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮತ ಪ್ರಚಾರದ ಘೋಷಣಾ ಗೀತೆ ಮಮತಾ ಬ್ಯಾನರ್ಜಿ ಅವರ “ಖೇಲಾ ಹೋಬ್ (ಗೇಮ್ ಆನ್)” ಇಂದು ಕೋಲ್ಕತ್ತಾದಲ್ಲಿ ನಡೆದ ಮೆಗಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ತೀವ್ರ ಖಂಡನೆಗೆ ಒಳಗಾಗಿದೆ.
ಮಮತಾ ಬ್ಯಾನರ್ಜಿ ಅವರ ಆಡಳಿತವನ್ನು “ಭ್ರಷ್ಟಾಚಾರ ಮತ್ತು ಲೂಟ್ ತಂತ್ರ (ಲೂಟಿ)” ಎಂದು ಗುರಿಯಾಗಿಸಿಕೊಂಡ ಪ್ರಧಾನಿ ಮೋದಿ, “ಏನೂ ಮರೆಮಾಡಲಾಗಿಲ್ಲ. ಬಂಗಾಳಕ್ಕೆ ಎಲ್ಲವೂ ತಿಳಿದಿದೆ. ಆದರೆ ಈ ಖೇಲ್ (ಆಟ) ಮುಂದುವರಿಯುವುದಿಲ್ಲ. ಖೇಲ್ ಖತಮ್ ಹೊನಾ ಚಾಹಿಯೆ ( ಈ ಆಟ ನಿಲ್ಲಬೇಕು). ” ಎಂದು ಪ್ರಧಾನಿ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದರು.
ಓದಿ : ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ
ಇನ್ನು ಈ ಮೆಗಾ ಮತ ಪ್ರಚಾರ ಸಭೆಯಲ್ಲಿ ಪ್ರಧಾನಿ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ನೇರ ಸವಾಲು ಎಸೆದರು. “ದೀದಿ, ಇದನ್ನು ಕೇಳಿ.. ಟಿ ಎಮ್ ಸಿ ಕಾ ಖೇಲಾ ಶೆಶ್, ಖೇಲ್ ಖತಮ್, ವಿಕಾಸ್ ಶುರು (ಟಿ ಎಮ್ ಸಿಯ ಆಟ ಮುಗಿದಿದೆ. ಆಟ ಮುಗಿಯುತ್ತದೆ, ಅಭಿವೃದ್ಧಿ ಪ್ರಾರಂಭವಾಗುತ್ತದೆ) ಎಂದು ಹೇಳಿದರು.
ಶುಕ್ರವಾರ(ಮಾ. 5), ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳಗಳನ್ನು ಘೋಷಿಸುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ “ಖೇಲಾ ಹೋಬ್, ದೇಖಾ ಹೋಬ್, ಜೆಟಾ ಹೋಬ್ … (ಗೇಮ್ ಆನ್, ನಾವು ನೋಡುತ್ತೇವೆ, ನಾವು ಗೆಲ್ಲುತ್ತೇವೆ) ಎಂದು ಮಮತಾ ಹೇಳಿದ್ದರು.
ಓದಿ : ವಿಚ್ಛೇದನದಿಂದ ಹಿಂದೆ ಸರಿದ ಪತ್ನಿ…ಮತ್ತೆ ಒಂದಾದ ನಟ ನವಾಜುದ್ದೀನ್ ದಂಪತಿ