ಪೋರ್ಟ್ ಮೊರೆಸ್ಬಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಭಾಗವಾಗಿ ಭಾನುವಾರ ಪಪುವಾ ನ್ಯೂಗಿನಿಗೆ ಬಂದಿಳಿದಿದ್ದು, ಈ ವೇಳೆ ಪ್ರಧಾನಿ ಜೇಮ್ಸ್ ಮರಾಪೆ ಅವರು ಪಾದಗಳನ್ನು ಮುಟ್ಟಿ ನಮಸ್ಕರಿಸಿ ಆತ್ಮೀಯವಾಗಿ ಸ್ವಾಗತಿಸಿದರು.
Advertisement
ಉಭಯ ನಾಯಕರ ಅಪ್ಪುಗೆಯ ನಂತರ ಪ್ರಧಾನಿ ಮೋದಿಯವರನ್ನು ಇತರ ಅಧಿಕಾರಿಗಳಿಗೆ ಪರಿಚಯಿಸಲಾಯಿತು. ಭಾರತೀಯ ವಲಸಿಗರು ಭವ್ಯವಾದ ಸ್ವಾಗತ ನೀಡಿದರು. ಅವರು ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.
ಪ್ರಧಾನಿ ಮೋದಿಯವರ ಭೇಟಿಯು ಪಪುವಾ ನ್ಯೂಗಿನಿಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ.