Advertisement

ಭಾರತೀಯತೆಯ ಸ್ವಾಗತ: ಪ್ರಧಾನಿ ಮೋದಿಗೆ ಬರ್ಲಿನ್‌ನಲ್ಲಿ ಆತ್ಮೀಯತೆಯ ಗೌರವ, ಹಾರೈಕೆ

01:44 AM May 03, 2022 | Team Udayavani |

ಬರ್ಲಿನ್‌: ತಮ್ಮ ಮೂರು ರಾಷ್ಟ್ರಗಳ ಐರೋಪ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರವಾಸದ ಮೊದಲ ಭಾಗವಾಗಿ, ಜರ್ಮನಿಯ ರಾಜಧಾನಿಯಾದ ಬರ್ಲಿನ್‌ಗೆ ಸೋಮವಾರ ಮುಂಜಾನೆ ಬಂದಿಳಿದರು. ಮೋದಿಯವರ ಸ್ವಾಗತಕ್ಕಾಗಿ, ಬರ್ಲಿನ್‌ನಲ್ಲಿರುವ ಭಾರತೀಯ ಸಮೂಹ ಕಾತುರದಿಂದ ಕಾಯುತ್ತಿತ್ತು. ಐತಿಹಾಸಿಕ ಬ್ರಾಂಡೆನ್‌ಬರ್ಗ್‌ ಗೇಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ, ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸಗಳನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಯಿತು.

Advertisement

ಸುಮಾರು 9 ಯಾರ್ಡ್‌ನಷ್ಟು ವಿಸ್ತೀರ್ಣದ ಪೈತಾನಿ ಸೀರೆಗಳನ್ನುಟ್ಟ ಮಹಾರಾಷ್ಟ್ರ ಮೂಲದ ಮಹಿಳೆಯರು ಸಾಂಪ್ರದಾಯಿಕವಾದ ಲೆಜಿಮ್‌ ನೃತ್ಯ ಪ್ರದರ್ಶಿಸಿದರು. ಅನಂತರ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಮಭಾಗ್‌ ಮೂಲದ ಭಾರತೀಯರ ತಂಡವೊಂದು “ಡೋಲ್‌-ತಾಷಾ’ ಕಾರ್ಯಕ್ರಮ ನಡೆಸಿಕೊಟ್ಟಿತು. ಈ ಸಂದರ್ಭದಲ್ಲಿ, ಛತ್ರಪತಿ ಶಿವಾಜಿಯ ವೇಷ ಧರಿಸಿದ್ದ ವ್ಯಕ್ತಿಯೊಬ್ಬ ಡೋಲು ಬಾರಿಸುವವರ ಮಧ್ಯೆ ಆಗಮಿಸಿ ಗಮನ ಸೆಳೆದ. ಇವಿಷ್ಟೇ ಅಲ್ಲದೆ, ಹಲವಾರು ನೃತ್ಯ- ಗಾಯನ ಸ್ಪರ್ಧೆಗಳು ನಡೆದವು.

ಇಡೀ ಕಾರ್ಯಕ್ರಮವನ್ನು ಮನಸಾರೆ ಆನಂದಿಸಿದ ಮೋದಿ, ತಮ್ಮ ಸರಣಿ ಟ್ವೀಟ್‌ಗಳಲ್ಲಿ ತಮ್ಮನ್ನು ವಿಭಿನ್ನವಾಗಿ ಸ್ವಾಗತಿಸಿದ ಬರ್ಲಿನ್‌ನ ಭಾರತೀಯರಿಗೆ ಧನ್ಯವಾದ ಅರ್ಪಿಸಿದರು.

ಒಲಾಫ್ ವಾಗ್ಧಾಳಿ: ಮೋದಿಯವರ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜರ್ಮನಿಯ ಪ್ರಧಾನಿ ಒಲಾಫ್ ಸ್ಕೋಲ್ಜ್, ಉಕ್ರೇನ್‌ನ ಮೇಲೆ ದಾಳಿ ಮಾಡುವ ಮೂಲಕ ರಷ್ಯಾ ವಿಶ್ವಸಂಸ್ಥೆಯ ನೀತಿಸೂತ್ರಗಳನ್ನು ಉಲ್ಲಂಘಿ ಸಿದೆ ಎಂದರು.

ಇದೇ ವೇಳೆ, ಪರಿಸರ ಸಂರಕ್ಷಣೆಯಲ್ಲಿ ಭಾರತ ಹೊಂದಿರುವ ನಿರ್ದಿಷ್ಟ ಗುರಿಗಳನ್ನು ಈಡೇರಿಸಲು ಜರ್ಮನಿಯು 80 ಸಾವಿರ ಕೋಟಿ ರೂ.ಗಳ ಸಹಾಯ ಮಾಡುವು ದಾಗಿ ಅವರು ಪ್ರಕಟಿಸಿದರು.

Advertisement

ಹೊಸ ಒಪ್ಪಂದಕ್ಕೆ ಸಹಿ: ಭಾರತ ಮತ್ತು ಜರ್ಮನಿಯ ಪ್ರಜೆಗಳಿಗೆ ಉಭಯ ದೇಶಗಳಲ್ಲಿ ಸುಲಭವಾಗಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಅಥವಾ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗು ವಂಥ ಒಪ್ಪಂದವೊಂದು ಎರಡೂ ದೇಶಗಳ ನಡುವೆ ಏರ್ಪಟ್ಟಿದೆ. ಬರ್ಲಿನ್‌ನಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ, ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿನಯ್‌ ಕ್ವಾತ್ರಾ, ಜರ್ಮನಿಯ ಗೃಹ ಇಲಾಖೆಯ ಕಾರ್ಯ ದರ್ಶಿ ಮಹಮುತ್‌ ಒಝೆ¾ಡಿರ್‌ ಸಹಿ ಹಾಕಿದರು.

ಮೊದಲ ಮ್ಯೂಸಿಕಲ್‌ ಪ್ರಧಾನಿ: ಬಾಲಿವುಡ್‌ ಶ್ಲಾಘನೆ
ಸಾಂಸ್ಕೃತಿಕ ಕಾರ್ಯಕ್ರಮದ ಅನಂತರ, ಭಾರತೀಯ ಸಮುದಾ ಯದವರನ್ನು ಮೋದಿ ವೈಯಕ್ತಿಕವಾಗಿ ಭೇಟಿಯಾ ದರು. ಆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಮೋದಿಯವರ ಮುಂದೆ ದೇಶಭಕ್ತಿ ಗೀತಗಾಯನ ಮಾಡಿದರು. ಅವರ ಹಾಡಿಗೆ ಮೋದಿಯವರೂ ದನಿಗೂಡಿಸಿದ್ದು ವಿಶೇಷವಾಗಿತ್ತು. ಇದರ ವೀಡಿಯೋಗಳನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಂಚಿಕೊಂಡಿದ್ದು, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾ ಖ್ಯಾತಿಯ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹಾಡಿಗೆ ದನಿಗೂಡಿಸಿದ್ದಕ್ಕಾಗಿ, ದೇಶದ ಮೊದಲ ಸಂಗೀತಮಯ ಪ್ರಧಾನಿ ಎಂದು ಅವರು ಮೋದಿಯವರನ್ನು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next