ಹೊಸದಿಲ್ಲಿ: ಪಾಕಿಸ್ಥಾನ ನಾಗರಿಕರು ಇತ್ತೀಚೆಗೆ ಮೋದಿಯನ್ನು ಬಾಯಿತುಂಬಾ ಹೊಗಳಿದ್ದರು. ಈಗ ಚೀನ ಸರದಿ. ಭಾರತ-ಚೀನ ನಡುವಿನ ಸಂಬಂಧ ಕಹಿಯಾಗಿದ್ದರೂ ಅಲ್ಲಿನ ಸಾಮಾಜಿಕ ಜಾಲತಾಣಿಗರು ಮಾತ್ರ ಮೋದಿಯನ್ನು “ಮೋದಿ ಲಾವೋಕ್ಷಿಯಾನ್ (ಅಮರ)’ ಎಂದೇ ಗೌರವಿಸುತ್ತಾರಂತೆ.
Advertisement
ಅಸಾಮಾನ್ಯ ಶಕ್ತಿಗಳಿರುವ ವಿಭಿನ್ನ ನಾಯಕರಿಗೆ ಮಾತ್ರ ಚೀನದಲ್ಲಿ ಹೀಗೆ ಕರೆಯಲಾಗುತ್ತದೆ. ಅಂತಹದ್ದೊಂದು ಗೌರವ ಮೋದಿಗೂ ಸಿಕ್ಕಿದೆ ಎಂದು ಅಮೆರಿಕದ ದಿ ಡಿಪ್ಲೋಮ್ಯಾಟ್ ನಿಯತಕಾಲಿಕೆಯಲ್ಲಿನ ಲೇಖನ ಹೇಳುತ್ತದೆ. ಮು ಚುನ್ಶನ್ ಎಂಬ ಲೇಖಕ ಚೀನ ಜಾಲತಾಣಗಳನ್ನು ಆಧರಿಸಿ ಹೀಗೆ ಬರೆದಿದ್ದಾರೆ.