Advertisement

ನವೀನ್ ಗ್ಯಾನ ಗೌಡರ್ ಕುಟುಂಬ ಸದಸ್ಯರ ಭೇಟಿಯಾದ ಪ್ರಧಾನಿ ಮೋದಿ

08:23 PM Jun 20, 2022 | Team Udayavani |

ಬೆಂಗಳೂರು : ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ವೇದಿಕೆಯ ಹಿಂಭಾಗದಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement

ನವೀನ್ ತಂದೆ ಶೇಖರ ಗೌಡ, ತಾಯಿ, ಸಹೋದರ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವೇಳೆ ಹಾಜರಿದ್ದರು.

ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ , ಮಾರ್ಚ್ 1 ರಂದು ಬೆಳಗ್ಗೆ ತಿಂಡಿ ತರಲೆಂದು ಹೊರಗೆ ಬಂದಿದ್ದ ವೇಳೆ ರಷ್ಯಾ ಪಡೆಗಳ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದ. 20 ದಿನಗಳ ಬಳಿಕ ಕೇಂದ್ರ ಸರಕಾರ ಶತ ಪ್ರಯತ್ನಗಳನ್ನು ಮಾಡಿ ಮೃತ ದೇಹವನ್ನು ತಾಯ್ನಾಡಿಗೆ ತರಲಾಗಿತ್ತು.

ಇದನ್ನೂ ಓದಿ :ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ; 40 ವರ್ಷ ಬೇಕಾಯಿತು; ವಿಪಕ್ಷಗಳತ್ತ ಚಾಟಿ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next