Advertisement

2021ರ ಟೈಮ್ ಪ್ರಭಾವಿ ವ್ಯಕ್ತಿಗಳ ಪಟ್ಟಿ; ನೆಹರು,ಇಂದಿರಾ ಬಳಿಕ ಮೋದಿಗೆ ಹೆಚ್ಚಿನ ಜನಪ್ರಿಯತೆ

12:37 PM Sep 16, 2021 | Team Udayavani |

ನ್ಯೂಯಾರ್ಕ್‌: “ಟೈಮ್‌’ ನಿಯತಕಾಲಿಕದ “2021ನೇ ಸಾಲಿನ ಜಗತ್ತಿನ 100 ಮಂದಿ ಪ್ರಭಾವ ಶಾಲಿಗಳ ಪಟ್ಟಿ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಪುಣೆಯಲ್ಲಿರುವ ಸೀರಂ ಇನ್ಸ್ಟಿಟ್ಯೂಟ್‌ ಅಫ್ ಇಂಡಿಯಾದ ಸಿಇಒ ಅದಾರ್‌ ಪೂನಾವಾಲಾ ಹೆಸರೂ ಇದೆ.

Advertisement

ಗಮನಾರ್ಹ ಅಂಶವೆಂದರೆ, ತಾಲಿಬಾನ್‌ ಉಗ್ರಸಂಘಟನೆಯ ಸಹ ಸ್ಥಾಪಕ ಮುಲ್ಲಾ ಅಬ್ದುಲ್‌ ಘನಿ ಬರದರ್‌ ಕೂಡ ಸ್ಥಾನ ಪಡೆದಿದ್ದಾನೆ.

” ಸ್ವಾತಂತ್ರ್ಯ ಬಂದು 74 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಮೂವರು ಪ್ರಮುಖ ನಾಯಕರ ಹೆಸರುಗಳನ್ನು ಉಲ್ಲೇಖಿಸಬಹುದು. ಅವರೆಂದರೆ, ಜವಾಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ.

ನೆಹರೂ, ಇಂದಿರಾ ಹೊಂದಿದ ಜನಪ್ರಿಯತೆ ಬಳಿಕ ಮೋದಿಯವರು ಹೆಚ್ಚಿನ ಮನ್ನಣೆ ಹೊಂದಿದ್ದಾರೆ’ ಎಂದು ಪ್ರಧಾನಿಯವರ ಆಯ್ಕೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ:ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣ: ವಿಚಾರಣೆ ಸೆ.17ಕ್ಕೆ ಮುಂದೂಡಿಕೆ

Advertisement

ಮಮತಾ ಬ್ಯಾನರ್ಜಿಯವರು “ಭಾರತದಲ್ಲಿ ಅಂಜಿಕೆ ಅರಿಯದ ರಾಜಕೀಯ ಕ್ಷೇತ್ರದ ನಾಯಕಿ’ ಎಂದು ಬಣ್ಣಿಸಲಾಗಿದ್ದರೆ, ಪೂನಾವಾಲಾ ಅವರನ್ನು “ಜಗತ್ತಿನ ಅತ್ಯಂತ ಕಿರಿಯ ಲಸಿಕೆ ಉತ್ಪಾದಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಉಳಿದಂತೆ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಸ್ಥಾನ ಪಡೆದ ಇತರ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next