Advertisement

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

08:26 AM May 23, 2022 | Team Udayavani |

ಟೋಕಿಯೊ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೋಕಿಯೊದ ಹೋಟೆಲ್‌ ನಲ್ಲಿ ಭಾರತೀಯ ವಲಸಿಗರು ಮತ್ತು ಜಪಾನ್ ನಾಗರಿಕರು ಸ್ವಾಗತಿಸಿದರು. ಈ ವೇಳೆ ಪ್ರಧಾನಿ ಮೋದಿ ಅಲ್ಲಿನ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.

Advertisement

ಮಕ್ಕಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದ ವೀಡಿಯೊಗಳು ವೈರಲ್ ಆಗಿದೆ. ಜಪಾನಿನ ಮಕ್ಕಳಲ್ಲಿ ಒಬ್ಬರು ಪ್ರಧಾನಿ ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದರು. ಇದರಿಂದ ಆಶ್ಚರ್ಯಗೊಂಡ ಪ್ರಧಾನಿ ಮೋದಿ, “ವಾಹ್! ನೀವು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ? ನೀವು ಅದನ್ನು ಚೆನ್ನಾಗಿ ಮಾತನಾಡುತ್ತೀರಿ.” ಎಂದರು.

ಇದನ್ನೂ ಓದಿ:ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

ಪ್ರಧಾನ ಮಂತ್ರಿಯವರೊಂದಿಗೆ ಸಂವಾದ ನಡೆಸಿದ ಮಕ್ಕಳು ಅವರ ಅಟೋಗ್ರಾಫ್ ಪಡೆದರು. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಭಾರತೀಯ ವಲಸಿಗರು “ಭಾರತ್ ಮಾ ಕಾ ಶೇರ್” (ಭಾರತದ ಸಿಂಹ) ಎಂಬ ಘೋಷಣೆಗಳನ್ನು ಕೂಗಿದರು.

Advertisement

ಸೋಮವಾರ, ಮೇ 23 ರಂದು ಪ್ರಾರಂಭವಾಗುವ ಎರಡು ದಿನಗಳ ಪ್ರವಾಸದ ಭಾಗವಾಗಿ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ನ ಟೋಕಿಯೊದಲ್ಲಿದ್ದಾರೆ.

ಕ್ವಾಡ್ ಪ್ರಭಾವಿ ಗುಂಪಿನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಚರ್ಚಿಸುತ್ತದೆ. ತಮ್ಮ ಎರಡು ದಿನಗಳ ಭೇಟಿಯಲ್ಲಿ, ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next