ಕಿರ್ಗಿಸ್ತಾನದ ರಾಜಧಾನಿ ಬಿಷೆRàಕ್‌ನಲ್ಲಿ ನಡೆಯುವ ಶೃಂಗದಲ್ಲಿ ಮೋದಿ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಇಮ್ರಾನ್ ಜತೆ ಮಾತುಕತೆ ಸಾಧ್ಯತೆಯ ಸುದ್ದಿಯೂ ಹರಿದಾಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಭಯೋತ್ಪಾದನೆ ನಿರ್ಮೂಲನೆ ಆಗುವವರೆಗೂ ಪಾಕ್ ಜತೆ ಮಾತುಕತೆ ಇಲ್ಲ ಎಂಬ ನಿಲುವಿಗೆ ಭಾರತ ಬದ್ಧವಾಗಿದೆ. ಮೋದಿ ಮತ್ತು ಖಾನ್ ಮಾತುಕತೆ ಕುರಿತು ಯಾವುದೇ ನಿರ್ಧಾರ ಆಗಿಲ್ಲ’ ಎಂದು ತಿಳಿಸಿದ್ದಾರೆ.
ಮಾತುಕತೆ ಮುಖ್ಯ: ಪ್ರಧಾನಿ ಮೋದಿ ಅವರು ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಇಮ್ರಾನ್ ಖಾನ್‌ಗೆ ಆಹ್ವಾನ ನೀಡದ್ದರ ಕುರಿತು ಪಾಕ್ ವಿದೇಶಾಂಗ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಮೋದಿಯವರ ಆಂತರಿಕ ರಾಜಕೀಯವು ಇಮ್ರಾನ್ ಖಾನ್‌ಗೆ ಆಹ್ವಾನ ನೀಡಲು ಅವಕಾಶ ಕಲ್ಪಿಸಿರಲಿಕ್ಕಿಲ್ಲ. ಆದರೆ, ಸಮಾರಂಭದಲ್ಲಿ ಭಾಗಿ ಆಗುವುದಕ್ಕಿಂತ ಹೆಚ್ಚಾಗಿ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವುದು ಮುಖ್ಯ ಎಂದು ಸಚಿವರು ಹೇಳಿದ್ದಾರೆ.
Advertisement