Advertisement

ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ

12:01 PM May 26, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾಗಿ ಗುರುವಾರಕ್ಕೆ 8 ವರ್ಷ ಪೂರೈಸಲಿದ್ದು, ಮೇ 30ರಂದು ಬಿಜೆಪಿ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಿದೆ.

Advertisement

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸಿತ್ತು. ಪ್ರಧಾನಿ ಮೋದಿ ಅವರು, ಸಾರ್ಕ್‌ ದೇಶಗಳ ಮುಖಂಡರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. 2019ರಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಐ ಮತ್ತೆ ಗೆದ್ದಿತ್ತು. ಎರಡನೇ ಅವಧಿ ವೇಳೆ ಮೇ 30ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಹೀಗಾಗಿಯೇ ಮೇ 30ರಿಂದ ಜೂ.15ರ ವರೆಗೆ ದೇಶಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೂ ದೇಶದ 73 ಸಾವಿರ ಬೂತ್‌ಗಳನ್ನು ಗಟ್ಟಿಗೊಳಿಸುವ ಸಂಬಂಧ ಪ್ರಚಾರ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ. ಜತೆಗೆ, ಮೋದಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಕುರಿತಂತೆಯೂ ಬಿಜೆಪಿ ಮೇ 30ರಿಂದ ಜನರಿಗೆ ಪರಿಚಯ ಮಾಡಿಕೊಡಲಿದೆ.

ಅಲ್ಲದೆ, ಕೇಂದ್ರದ ಎಲ್ಲ ಸಚಿವರು ಹಳ್ಳಿಗಳಿಗೂ ಭೇಟಿ ಮಾಡಲಿದ್ದಾರೆ. ಈ ಅವಧಿಯಲ್ಲಿ ಸಚಿವರು ವಿಕಾಸ್‌ ತೀರ್ಥ ಯಾತ್ರೆ ಕೈಗೊಳ್ಳಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು, ತಮ್ಮ ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next