Advertisement

ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ಹಂಚಿದ ಪ್ರಧಾನಿ ಮೋದಿ: ವಿಡಿಯೋ ವ್ಯಾಪಕ ವೈರಲ್

02:39 PM Aug 23, 2020 | Mithun PG |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ಹಂಚಿದ್ದು, ಈ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಇದೀಗ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಅಪಾರ ಜನಮೆಚ್ಚುಗೆ ಪಡೆದಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿಯವರ ವಾಡಿಕೆಯ ವ್ಯಾಯಾಮದ ಸಮಯದಲ್ಲಿ ಈ ವಿಡಿಯೋವನ್ನು ಚಿತ್ರಿಕರಿಸಲಾಗಿದೆ.

ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ‘ಅಮೂಲ್ಯ ಕ್ಷಣಗಳು’ ಎಂದು ಶೀರ್ಷಿಕೆ  ನೀಡಿದ್ದಾರೆ.

ಬೆಳಗ್ಗಿನ ಸಂದರ್ಭದಲ್ಲಿ ನವಿಲುಗಳು ಸಾಮಾನ್ಯವೆಂಬಂತೆ ಕಂಡುಬರುತ್ತದೆ. ಪ್ರಧಾನಿ ಮೋದಿ ನಿವಾಸದಲ್ಲಿ  ಹಲವು ಪಕ್ಷಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.

Advertisement

ಇಂದು ಮುಂಜಾನೆಯಷ್ಟೇ, ಪ್ರಧಾನಿ ಮೋದಿ, ನುವಾಖೈ ಜುಹಾರ್ ಹಬ್ಬದ ಸಂದರ್ಭದಲ್ಲಿ ರೈತರಿಗೆ ಶುಭಾಶಯಗಳನ್ನು ತಿಳಿಸಿದರು. ಇದೊಂದು ಕೃಷಿ ಉತ್ಸವವಾಗಿದ್ದು, ಪಶ್ಚಿಮ ಒಡಿಶಾ ಮತ್ತು ಚತ್ತಿಸ್ ಗಢದಲ್ಲಿ ಆಚರಿಸಲಾಗುತ್ತದೆ.

ರೈತರ ಶ್ರಮ ಅಪಾರವಾದದ್ದು, ಇವರ ಪ್ರಯತ್ನದಿಂದಾಗಿ ನಮ್ಮ ರಾಷ್ಟ್ರಕ್ಕೆ ಆಹಾರ ಪೂರೈಕೆಯಾಗುತ್ತಿದೆ.  ಈ ಶುಭ ದಿನ ಎಲ್ಲರಿಗೂ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ನುವಾಖೈ ಜುಹಾರ್! ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next