ಹಿರೋಶಿಮಾ: ಜಪಾನ್ ನ ಹಿರೋಶಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪಪುವಾ ನ್ಯೂಗಿನಿ ದೇಶಕ್ಕೆ ತೆರಳಿದ್ದಾರೆ.
ಜಿ7 ಸಭೆಯ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಜಪಾನ್ ಭೇಟಿ ಫಲಪ್ರದವಾಗಿತ್ತು ಎಂದಿದ್ದಾರೆ. “ಇದು ಜಪಾನ್ ಗೆ ಫಲಪ್ರದ ಭೇಟಿಯಾಗಿದೆ. ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಪಿಎಂ ಕಿಶಿದಾ, ಸರ್ಕಾರ ಮತ್ತು ಜಪಾನ್‌ನ ಜನರಿಗೆ ಕೃತಜ್ಞತೆಗಳು” ಎಂದಿದ್ದಾರೆ.
ಇದನ್ನೂ ಓದಿ:ಮಹತ್ವದ ಪಂದ್ಯಕ್ಕೂ ಮೊದಲು ಶಾಕ್: RCB ಪ್ರಮುಖ ಬೌಲರ್ ಕೂಟದಿಂದಲೇ ಔಟ್!
ಜಪಾನಿನ ಹಿರೋಷಿಮಾದಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಪಪುವಾ ನ್ಯೂಗಿನಿಯಾಗೆ ತೆರಳಿದರು. ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ನಂತರ ಪಪುವಾ ನ್ಯೂಗಿನಿಯಾದ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳುತ್ತಾರೆ.