Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ
3 ನೌಕೆಗಳನ್ನು ಒಂದೇ ಬಾರಿಗೆ ನಿಯೋಜಿಸಿರುವುದು ಇದೇ ಮೊದಲು
Team Udayavani, Jan 16, 2025, 8:34 AM IST
ಮುಂಬಯಿ: ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ವಿಧ್ವಂಸಕ ನೌಕೆ ಐಎನ್‌ಎಸ್ ನೀಲಗಿರಿ ಹಾಗೂ ಅತ್ಯಾಧುನಿಕ ಯುದ್ಧನೌಕೆ
ಐಎನ್‌ಎಸ್ ಸೂರತ್ ಮತ್ತು ಅತ್ಯಂತ ಪ್ರಭಾವಶಾಲಿ ಸಬ್‌ಮರೀನ್ ಐಎನ್‌ಎಸ್ ವಾಗ್ಶಿರ್ ಅನ್ನು ಪ್ರಧಾನಿ ಮೋದಿ ಬುಧವಾರ ಲೋಕಾರ್ಪಣೆಗೊಳಿಸಿದ್ದಾರೆ. ದೇಶಿ ನಿರ್ಮಿತವಾದ ಈ 3 ನೌಕೆಗಳನ್ನು ಒಂದೇ ಬಾರಿಗೆ ನಿಯೋಜಿಸಿರುವುದು ಇದೇ ಮೊದಲು.
ಮುಂಬಯಿಯ ಹಡಗು ನಿರ್ಮಾಣ ಕಟ್ಟೆಯಲ್ಲಿ ನೌಕೆಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ “ಭಾರತವು ಸಾಗರ ಭದ್ರತೆಯಲ್ಲಿ ಬಹುದೊಡ್ಡ ಶಕ್ತಿ ಯಾಗಿ ಪರಿಣಮಿಸಿದ್ದು, ವಿಶ್ವ ರಾಷ್ಟ್ರಗಳ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ. 10 ವರ್ಷ ದಲ್ಲಿ 33 ನೌಕೆ, 7 ಜಲಾಂತರ್ಗಾಮಿಗಳ ನಿಯೋಜನೆ ಮೂಲಕ ನೌಕಾಪಡೆ ಬಲ ಹೆಚ್ಚಿದೆ ಎಂದಿದ್ದಾರೆ.
ಆತ್ಮನಿರ್ಭರ ಭಾರತದತ್ತ ದೇಶದ ಪ್ರಬಲ ಹೆಜ್ಜೆಯನ್ನು ಶ್ಲಾ ಸಿದ ಅವರು, ಭಾರತದ ರಕ್ಷಣ ಉತ್ಪಾದನ ಮೌಲ್ಯವು 1.25 ಲಕ್ಷ ಕೋಟಿ ರೂ. ದಾಟಿದ್ದು, 100ಕ್ಕೂ ಅಧಿಕ ದೇಶಗಳಿಗೆ ರಕ್ಷಣ ಸಾಮಾಗ್ರಿ ರಫ್ತು ಮಾಡಲಾಗುತ್ತಿದೆ ಎಂದಿದ್ದಾರೆ. ಯುದ್ಧನೌಕೆಗಳನ್ನು ನೌಕಾಪಡೆ ಯುದ್ಧ ನೌಕೆ ಡಿಸೈನ್ ಬ್ಯೂರೋ ವಿನ್ಯಾಸ ಮಾಡಿದ್ದು, ಮಡಂಗಾವ್ ಡಾಕ್‌ಶಿಪ್ ಬಿಲ್ಡರ್ಸ್ ಲಿಮಿಟೆಡ್(ಎಂಡಿಎಲ್) ಅಭಿವೃದ್ಧಿ ಪಡಿಸಿದೆ. ಜಲಾಂತರ್ಗಾಮಿ ನೌಕೆಯನ್ನು ಫ್ರೆಂಚ್ ನಾವಲ್ ಡಿಫೆನ್ಸ್, ಎನರ್ಜಿ ಗ್ರೂಪ್ ವಿನ್ಯಾಸ ಮಾಡಿದೆ. ಯುದ್ಧನೌಕೆಗಳು ಸರ್ವ ಪರಿಸ್ಥಿತಿಯಲ್ಲೂ ಎದುರಾಳಿಯನ್ನು ಮಣಿಸುವ ಅತ್ಯಾಧುನಿಕ ವ್ಯವಸ್ಥೆ ಸಾಮರ್ಥ್ಯ ಹೊಂದಿದ್ದರೆ, ಸಬ್‌ಮರೀನ್ ಯುದ್ಧನೌಕೆ ವಿರೋಧಿ ಕ್ಷಿಪಣಿಗಳು ಸೇರಿದಂತೆ ಶಸ್ತ್ರ ಸಜ್ಜಿತವಾಗಿದೆ.
ಐಎನ್‌ಎಸ್ ನೀಲಗಿರಿ
– ನೀಲಗಿರಿ ಪರ್ವತ ಹೆಸರು ಪಡೆದ ಮೊದಲ ವಿಶ್ವದ ಅತ್ಯಾಧುನಿಕ ನೌಕೆ
– ರಾಡರ್ ಕಣ್ತಪ್ಪಿಸುವ ಅಧಿಕ ಸಾಮರ್ಥ್ಯ ವಿವಿಧ ಕಾಪ್ಟರ್ ನಿರ್ವಹಣೆಗೂ ಸೈ
ಐಎನ್‌ಎಸ್ ಸೂರತ್
– ಗುಜರಾತ್‌ನ ಸೂರತ್ ಹೆಸರಿರುವ, 31 ತಿಂಗಳಲ್ಲಿ ಕ್ಷಿಪ್ರವಾಗಿ ನಿರ್ಮಿಸಿದ ನೌಕೆ.
– ಬ್ರಹ್ಮೋಸ್ ಕ್ಷಿಪಣಿ ಸಜ್ಜಿತ ದೊಡ್ಡ ನೌಕೆ.
ವಾಗ್ಶಿರ್ ಸಬ್‌ಮರೀನ್
– ಒಂದೇ ಬಾರಿ 18 ಟಾರ್ಪಿಡೋ ಉಡಾಯಿಸನಲ್ಲ, ಅತ್ಯಂತ ನಿಶಬ್ದ ನೌಕೆ.
– 1150 ಅಡಿ ಆಳಕ್ಕಿಳಿದು, ಸತತ 50 ದಿನಗಳಕಾಲ ಉಳಿವ ಸಾಮರ್ಥ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahakumbh Mela:ಬಾಗಿಲು ಲಾಕ್ ಆಗಿದ್ದಕ್ಕೆ ಆಕ್ರೋಶಗೊಂಡು ವಿಶೇಷ ರೈಲಿನ ಮೇಲೆ ಕಲ್ಲುತೂರಾಟ!
Video: ರಿವರ್ಸ್ ತೆಗೆಯುವ ವೇಳೆ ಅವಾಂತರ… ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಕಾರು
Uttar Pradeshದಲ್ಲಿ ಮತ್ತೊಂದು ದುರಂತ: ಲಡ್ಡು ಮಹೋತ್ಸವದಲ್ಲಿ ಕಾಲ್ತುಳಿತ-7 ಮಂದಿ ಸಾ*ವು
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Delhi polls: ಬಿಜೆಪಿಗ ಸಿಂಗ್ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!