Advertisement

PM Modi ಹಿರೋಷಿಮಾದಲ್ಲಿ: G7 ಶೃಂಗಸಭೆಯಲ್ಲಿ ಭಾಗಿ

07:05 PM May 19, 2023 | Team Udayavani |

ಹಿರೋಷಿಮಾ : ಮೇ 19-21ರವರೆಗೆ ಜಪಾನ್ ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಿರೋಷಿಮಾದಲ್ಲಿದ್ದಾರೆ. ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಅವರು ಮಾತನಾಡುವ ನಿರೀಕ್ಷೆಯಿದೆ.

Advertisement

ಪ್ರಬಲ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿ ಜಪಾನ್ G7 ಶೃಂಗಸಭೆಯನ್ನು ಆಯೋಜಿಸುತ್ತಿದೆ. G7 ಅತ್ಯಂತ ಮುಂದುವರಿದ ದೇಶಗಳನ್ನು ಒಳಗೊಂಡಿದ್ದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಎಸ್ ಮತ್ತು ಯುಕೆ, ಯುರೋಪಿಯನ್ ಯೂನಿಯನ್ (EU) ಒಳಗೊಂಡಿದೆ.

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಾಯಕರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. G7 ಸಭೆಯ ವಿಶಾಲ ಕಾರ್ಯಸೂಚಿಯು ಪರಮಾಣು ನಿಶ್ಯಸ್ತ್ರೀಕರಣ, ಆರ್ಥಿಕ ಭದ್ರತೆ, ಪ್ರಾದೇಶಿಕ ಸಮಸ್ಯೆಗಳು, ಹವಾಮಾನ ಬದಲಾವಣೆ, ಇಂಧನ ಭದ್ರತೆ, ಆಹಾರ ಮತ್ತು ಆರೋಗ್ಯದ ಸುತ್ತ ನಡೆಯಲಿದೆ. ಭಾರತ ಮೇ 20 ಮತ್ತು ಮೇ 21 ರಂದು ಎರಡು ಔಪಚಾರಿಕ ಅಧಿವೇಶನಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

“ಈ ವರ್ಷ ಭಾರತವು G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ G7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿಯು ವಿಶೇಷವಾಗಿ ಅರ್ಥಪೂರ್ಣವಾಗಿದೆ. ನಾನು G7 ದೇಶಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಒಟ್ಟಾಗಿ ಪರಿಹರಿಸುವ ಅಗತ್ಯತೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next