Advertisement

ಜೈಷ್ ಉಗ್ರರ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿ,ಶಾ, ದೋವಲ್: ಹೈ ಅಲರ್ಟ್

09:18 AM Sep 26, 2019 | Mithun PG |

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದತಿ ಮಾಡಿರುವ ಕೇಂದ್ರದ ವಿರುದ್ಧ  ಪ್ರತೀಕಾರಕ್ಕೆ ಮುಂದಾಗಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ, ಪ್ರಧಾನಿ ಮೋದಿ, ಗೃಹ ಸಚಿವ ಆಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹತ್ಯೆಗೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Advertisement

ಪಾಕ್ ಗುಪ್ತಚರ ಸಂಸ್ಥೆ, ಐಎಸ್ ಐ ಜೊತೆ ಸೇರಿಕೊಂಡು ಭಾರೀ ಸಂಚು ರೂಪಿಸುತ್ತಿದ್ದು, ಉಗ್ರ ಶಮ್ಮೇರ್ ವಾನಿ ಹಾಗೂ ಹ್ಯೂಂಡ್ಲರ್ ನಡುವೆ ಸಂಭಾಷಣೆ ಪ್ರಕಾರ ವ್ಯವಸ್ಥಿತ ದಾಳಿಗೆ ತಂಡ ರಚಿಸಲಾಗುತ್ತಿರುವ ಮಾಹಿತಿ ತಿಳಿದುಬಂದಿದೆ ಎಂದು  ಗುಪ್ತಚರ ಇಲಾಖೆ ತಿಳಿಸಿದೆ.

ಈ ಹಿನ್ನಲೆಯಲ್ಲಿ ಜಮ್ಮು , ಪಠಾಣ್ ಕೋಟ್ , ಅಮೃತಸರ, ಜೈಪುರ , ಗಾಂಧೀನಗರ, ಕಾನ್ಪುರ, ಲಕ್ನೋ ಸೇರಿದಂತೆ 30 ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೆ ನಾಲ್ಕು ವಿಮಾನ ನಿಲ್ದಾಣಗಳ ಮೇಲೂ ದಾಳಿ ನಡೆಯುವ ಸಂಚನ್ನು ರೂಪಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next