Advertisement
ಜೂನ್ 20ಕ್ಕೆ ಬೆಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ರೋಡ್ ಶೋ ನಡೆಸಲು ಸಿದ್ದತೆ ನಡೆಸಲಾಗಿದ್ದು, ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ,ಮಲ್ಲೇಶ್ವರಂ ನಲ್ಲಿ ರೋಡ್ ಶೋ ನಡೆಸಲಾಗುತ್ತಿದೆ.
Related Articles
ಈ ವರ್ಷ ಚುನಾವಣಾ ವರ್ಷ ಕೂಡ. ಅವರ ಈ ಕಾರ್ಯಕ್ರಮ ವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಅವರು ಪೂರ್ವ ಸಿದ್ದತಾ ಸಭೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Advertisement
ಯಲಹಂಕದಿಂದ ಪ್ರಧಾನಿ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು. ಸಾರ್ವಜನಿಕ ಸಭೆಗೆ 50 ರಿಂದ 60 ಸಾವಿರ ಜನರ ಸೇರಿಸುವ ಗುರಿ ಹೊಂದಿದ್ದೇವೆ. ಅಲ್ಲಿ ಜನರಿಗೆ ಸರ್ಕಾರದಿಂದ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಜನರನ್ನು ಕರೆಸುವುದು ನಿಮ್ಮ ಜವಬ್ದಾರಿ. ಹೀಗಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. 18ನೇ ತಾರೀಕಿನ ಒಳಗೆ ಎಲ್ಲ ರೀತಿಯ ಸಿದ್ದತೆ ಆಗಬೇಕು. ಪ್ರಧಾನಿಗಳ ಕಾರ್ಯಕ್ರಮ ಗಂಭೀರವಾಗಿ ತೆಗೆದುಕೊಂಡು, ಶ್ರಮ ವಹಿಸಬೇಕು ಎಂದು ಸಿಎಂ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.