Advertisement

35 ಸಾವಿರ ರೈತರಿಗೆ ಪಿಎಂ ಕಿಸಾನ್‌ ನಿಧಿ ಇಲ್ಲ

05:05 PM Jun 08, 2023 | Team Udayavani |

ರಾಮನಗರ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ(ಪಿಎಂ ಕಿಸಾನ್‌) ಯೋಜನೆಯ ಸವಲತ್ತು ಪಡೆಯಲು ಇ ಕೆವೈಸಿ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ 35,925 ಮಂದಿ ಇದುವರೆಗೆ ಇ-ಕೆವೈಸಿ ಮಾಡಿಸದ ಪರಿಣಾಮ ಅವರಿಗೆ ಯೋಜನೆ ದೊರೆಯದಾಗಿದೆ.

Advertisement

ಜಿಲ್ಲೆಯಲ್ಲಿ 1,10,355 ಮಂದಿ ಫಲಾನುಭವಿಗಳಿದ್ದು, ಇವರಲ್ಲಿ ಕೇವಲ 74,430 ಮಂದಿ ಮಾತ್ರ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಉಳಿದವರು ಇ-ಕೆವೈಸಿ ಮಾಡಿಸಿಕೊಂಡಿಲ್ಲ. ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಹಣ ಪಾವತಿಯಾಗದ ಕಾರಣ ಜಿಲ್ಲೆಯಲ್ಲಿ ಶೇ.33ರಷ್ಟು ರೈತರು ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ.

ರಾಮನಗರ ತಾಲೂಕಿನಲ್ಲಿ 7,079, ಚನ್ನಪಟ್ಟಣ ತಾಲೂಕಿನಲ್ಲಿ 6,682, ಕನಕಪುರ ತಾಲೂಕಿನಲ್ಲಿ 11,699 ಹಾಗೂ ಮಾಗಡಿ ತಾಲೂಕಿನಲ್ಲಿ 10,465 ಫಲಾನುಭವಿಗಳು ಇ-ಕೆವೈಸಿ ಮಾಡಿರುವುದಿಲ್ಲ. ಈಗಾಗಲೇ 13 ಕಂತು ಹಣಪಾವತಿ ಮಾಡಲಾಗಿದ್ದು, ಇ-ಕೆವೈಸಿ ಇಲ್ಲದ ರೈತರಿಗೆ ಹಣ ಪಾವತಿ ಮಾಡಿಲ್ಲ. ಇದೀಗ 14ನೇ ಸುತ್ತಿನ ಹಣವನ್ನು ಬಿಡುಗಡೆ ಮಾಡಲು ಇ-ಕೆವೈಸಿ ಅತ್ಯಗತ್ಯವಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಹಣ ಪಾವತಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೂಡಲೇ ಇ-ಕೆವೈಸಿ ಮಾಡಿಸಿ: ಇದುವರೆಗೆ ಇ-ಕೆವೈಸಿ ಮಾಡಿಸಿಕೊಳ್ಳದ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್‌ ಕೇಂದ್ರ, ನಾಗರೀಕ ಸೇವಾ ಕೇಂದ್ರ ಅಥವಾ ಸೈಬರ್‌ ಸೆಂಟರ್‌ಗಳಲ್ಲಿ ಆಧಾರ್‌ ಆಧಾರಿತ ಓಟಿಪಿ ಮೂಲಕ ಅಥವಾ ಹೆಬ್ಬೆಟ್ಟಿನ ಗುರುತು ನೀಡುವ ಮೂಲಕ ಇ-ಕೆವೈಸಿ ಮಾಡಿಸುವ ಅವಕಾಶವಿದ್ದು ಕೂಡಲೇ ಇ-ಕೆವೈಸಿ ಮಾಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

30 ಇ-ಕೆವೈಸಿಗೆ ಕಡೆ ದಿನ: ಕೃಷಿ ಆಯುಕ್ತರು ಜೂ.3ರಂದು ನಡೆದ ಗೂಗಲ್ ಸಭೆಯಲ್ಲಿ ಜೂ.30ರೊಳಗೆ ಎಲ್ಲಾ ಅರ್ಹ ರೈತರ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದ್ದಾರೆ. ವಿಶೇಷ ಆಂದೋಲನ ರೂಪದಲ್ಲಿ ರೈತರಿಗೆ ಇ-ಕೆವೈಸಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲು ತಮ್ಮ ಎಲ್ಲಾ ಜಿಲ್ಲಾಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದ್ದು, ನಿಗದಿತ ದಿನಾಂಕದೊಳಗೆ ಎಲ್ಲಾ ರೈತರು ಇ-ಕೆವೈಸಿ ಪೂರ್ಣಗೊಳಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next