Advertisement
ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಅಕ್ರಮ ನಡೆಸಿರುವುದನ್ನು ರಾಜ್ಯದ ಕೃಷಿ ಇಲಾಖೆ ಪತ್ತೆ ಹಚ್ಚಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ಅರ್ಹ ರೈತರಿಗೆ ಬರುವ ಹಣವನ್ನು ಲಪಟಾಯಿಸಲು ಹೊರರಾಜ್ಯದ ವಂಚಕರು ಹೂಡಿದ ಸಂಚು ಈಗ ಬಹಿರಂಗಗೊಂಡಿದೆ.
Related Articles
Advertisement
ಅನುಮಾನದ ಮೇಲೆ 85 ಸಾವಿರ ಖಾತೆಗಳು ಬ್ಲಾಕ್.!
ಕೃಷಿ ಅಧಿಕಾರಿಗಳು ಈ ವಂಚನೆಯನ್ನು ಮತ್ತಷ್ಟು ಕೆದಕಿದಾಗ ಗಾಬರಿಗೊಳಿಸುವ ಮಾಹಿತಿಗಳು ಮೇಲ್ನೋಟಕ್ಕೆ ಲಭ್ಯವಾಗಿವೆ ಎಂಬ ವರದಿಯಾಗಿದೆ. ನಕಲಿ ಖಾತೆಗಳನ್ನು ಬಳಸಿ ವಂಚಿಸುವ ಪ್ರಕರಣ ಒಂದಲ್ಲ ಎರಡಲ್ಲ ಸರಿಸುಮಾರು 85 ಸಾವಿರ ಖಾತೆಗಳಲ್ಲಿ ಮಾಡಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಠಾಣೆಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿಯೇ 85 ಸಾವಿರ ಅನುಮಾನಾಸ್ಪದ ಖಾತೆಗಳನ್ನು ಸಂಪೂರ್ಣ ಬ್ಲಾಕ್ ಮಾಡಲಾಗಿದ್ದು ಸದ್ಯ ಪ್ರಕರಣ ತನಿಖೆಯಲ್ಲಿದೆ ಎಂದು ವರದಿಯಾಗಿದೆ.
ಕಿಸಾನ್ ಸಮ್ಮಾನ್ ಯೋಜನೆ :
ಕಿಸಾನ್ ಸಮ್ಮಾನ್ ನಿಧಿ, ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದರಡಿಯಲ್ಲಿ ಸರ್ಕಾರ ಅರ್ಹ ರೈತರ ಖಾತೆಗೆ ವರ್ಷಕ್ಕೆ 6000 ರೂಪಾಯಿ ನೆರವನ್ನು ನೀಡುತ್ತದೆ. ಅರ್ಹ ಬಡ ರೈತರ ಸಹಾಯಕ್ಕಾಗಿ ಈ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿತ್ತು.
ಓದಿ : ಭಾರ್ಗವಿ ಬಿಲ್ಡರ್ಸ್,ನಿರ್ಮಾಣ್ ಹೋಮ್ಸ್ ಸಹಭಾಗಿತ್ವ:ಕೈಲಾಶ್ ವಸತಿಸಮುಚ್ಚಯಕ್ಕೆ ಶಿಲಾನ್ಯಾಸ