Advertisement

ಮೂಲ ಸೌಕರ್ಯಕ್ಕೆ ವೇಗ; ಗತಿಶಕ್ತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

12:35 AM Oct 14, 2021 | Team Udayavani |

ಹೊಸದಿಲ್ಲಿ: ದೇಶದ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗತಿಶಕ್ತಿ ಯೋಜನೆಗೆ ಬುಧವಾರ ಚಾಲನೆ ನೀಡಿದ್ದಾರೆ.

Advertisement

ಯೋಜನೆಯ ಒಟ್ಟು ಮೊತ್ತ 100 ಲಕ್ಷ ಕೋಟಿ ರೂ. ಇದೊಂದು ರಾಷ್ಟ್ರೀಯ ಮಾಸ್ಟರ್‌ ಪ್ಲ್ಯಾನ್ ಆಗಿದ್ದು, ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನುಕೈಗೊಳ್ಳಲಾಗುತ್ತದೆ. ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಜನರು ಪಾವತಿ ಮಾಡುವ ತೆರಿಗೆಗೆ ಇದುವರೆಗೆ ಸೂಕ್ತ ನ್ಯಾಯ ಸಿಕ್ಕಿರಲಿಲ್ಲ. ಹಿಂದಿನ ಅವಧಿಗಳಲ್ಲಿ ಸೂಕ್ತ ರೀತಿಯಲ್ಲಿ ಕಾಮಗಾರಿಗಳ ಅನುಷ್ಠಾನಕ್ಕೆ ಉದಾ ಸೀನತೆಯ ಭಾವ ತಳೆಯಲಾಗುತ್ತಿತ್ತು. ಈ ಮೂಲಕ ತೆರಿಗೆದಾರರಿಗೆ ಅವಮಾನವಾಗುವ ಸ್ಥಿತಿ ಇತ್ತು ಎಂದು ಪ್ರತಿಪಾದಿಸಿದ್ದಾರೆ.

ದೇಶದ ಮೂಲ ಸೌಕರ್ಯ ಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ 16 ಇಲಾಖೆಗಳನ್ನು ಒಂದೇ ವೇದಿಕೆಗೆ ತರಲಾಗಿದೆ. ಈ ಮೂಲಕ ಅವುಗಳ ವೆಚ್ಚ ತಗ್ಗಿಸುವುದು, ಕಾರ್ಗೊ ನಿರ್ವಹಣ ವೆಚ್ಚದಲ್ಲೂ ಕಡಿಮೆಗೊಳಿಸುವುದು ಆದ್ಯತೆಯಾಗಲಿದೆ ಎಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಳ್ಳಲಿರುವ ಮೂಲ ಸೌಕರ್ಯ ಯೋಜನೆಗಳನ್ನು ಒಂದೇ ವೇದಿಕೆ ಯಡಿ ತರಲಾಗಿದೆ. ಜತೆಗೆ ಸೂಕ್ತ ರೀತಿಯ ವಿನ್ಯಾಸ ವನ್ನೂ ಕೈಗೊಳ್ಳುವ ಬಗ್ಗೆ ಪರಾಮರ್ಶೆ ನಡೆಸಲಾಗುತ್ತದೆ ಎಂದರು ಪ್ರಧಾನಿ ನರೇಂದ್ರ ಮೋದಿ.

ಶೇ.13ರಷ್ಟು ವೆಚ್ಚ: ದೇಶದ ಜಿಡಿಪಿ ಪ್ರಮಾಣ ಶೇ.13ರಷ್ಟು ಮೊತ್ತ ವಿವಿಧ ಯೋಜನೆಗಳಿಗೆ ನಿರ್ವಹಣ ವೆಚ್ಚವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲ್ರಾನ್‌ ಮೂಲಕ ಇಂಥ ವೆಚ್ಚ ತಗ್ಗಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಗುಣಮಟ್ಟ ಪ್ರಧಾನ: ದೇಶಕ್ಕೆ ಅತ್ಯುತ್ತಮ ಗುಣಮಟ್ಟದ ಮೂಲಸಕೌರ್ಯಗಳು ಬೇಕು. ಅದು ಇಲ್ಲದೆ, ಅಭಿವೃದ್ಧಿ ಸಾಧಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸಮಗ್ರ ರೀತಿಯಲ್ಲಿ ಅಭಿವೃದ್ಧಿಯ ಕಲ್ಪನೆಗಳನ್ನು ಹೊಂದ ಬೇಕಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಕ್ಷಿಪ್ರಗತಿಯಲ್ಲಿ ಯೋಜನೆಗಳು ಅನುಷ್ಠಾನಗೊಂಡು, ದೇಶದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಬೆಂಗಳೂರಿನಲ್ಲಿ ಎಂ.ಎಸ್‌. ಧೋನಿ ಕ್ರಿಕೆಟ್‌ ಅಕಾಡೆಮಿ

70 ವರ್ಷಗಳಲ್ಲಿ ತಮ್ಮ ನೇತೃತ್ವದ ಸರಕಾರದ ಅವಧಿಯಲ್ಲಿ ವೇಗವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ದೇಶದಲ್ಲಿ ಅಂತಾರಾಜ್ಯ ಅನಿಲ ಪೈಪ್‌ಲೈನ್‌ ಅನ್ನು 1987ರಲ್ಲಿ ಅನುಷ್ಠಾನಗೊಳಿಸಲಾಯಿತು. 2014ರಿಂದ 15 ಸಾವಿರ ಕಿಮೀ ದೂರದಷ್ಟು ನೈಸರ್ಗಿಕ ಅನಿಲ ಪೈಪ್‌ ಲೈನ್‌ ಹಾಕಲಾಗಿದೆ. ಸದ್ಯ 16 ಸಾವಿರ ಕಿಮೀಗಿಂತ ಹೆಚ್ಚು ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. 2014ರಿಂದ 2019ರ ಅವಧಿಯಲ್ಲಿ 1,300 ಕಿಮೀ ರೈಲ್ವೇ ಹಳಿಯನ್ನು ದ್ವಿಪಥಕ್ಕೆ ಪರಿವರ್ತಿಸಲಾಗಿದೆ. 7 ವರ್ಷಗಳಲ್ಲಿ 9 ಸಾವಿರ ಕಿಮೀ ರೈಲು ಮಾರ್ಗ ದ್ವಿಪಥ ಗೊಳಿಸಲಾಗಿದೆ. ಮಾತ್ರವಲ್ಲದೆ, ಹಲವು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನೂ ಪ್ರಧಾನಿ ಇದೇ ಸಂದರ್ಭದಲ್ಲಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next