ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ 42 ಕೋಟಿ ಬಡವರಿಗೆ ಅನುಕೂಲವಾಗಿದ್ದು, ಈ ಯೋಜನೆಗಾಗಿ ಈವರೆಗೆ 68,820 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
“ಮಾ.26ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಪ್ಯಾಕೇಜ್ ಪ್ರಕಟಿಸಿದ್ದರು. ಅದರ ಅನ್ವಯ ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ, ನಗದು ಮೂಲಕ ನೆರವು ನೀಡಲಾಗಿದೆ’ ಎಂದಿದೆ ಸಚಿವಾಲಯ.
ಪಿಎಂ- ಕಿಸಾನ್ ಯೋಜನೆಯ ಅನ್ವಯ 17,891 ಕೋಟಿ ರೂ. ಮೊತ್ತವನ್ನು ವಿತರಿಸಲಾಗಿದೆ. ಈ ಯೋಜನೆಯಲ್ಲಿ 8.94 ಕೋಟಿ ಮಂದಿ 2 ಸಾವಿರ ರೂ. ಮೊತ್ತವನ್ನು ಪಡೆದುಕೊಂಡಿದ್ದಾರೆ.30,925 ಕೋಟಿ ರೂ. ಮೊತ್ತವನ್ನು 20.6 ಕೋಟಿ ಮಹಿಳಾ ಜನಧನ ಖಾತೆಗೆ ಮೂರು ಕಂತುಗಳಲ್ಲಿ ನೀಡಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.
ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕಿಗೆ 100 ಕೋಟಿ ದಂಡ
ವಿದೇಶಿ ವಿನಿಯಮ ನಿಯಮಗಳನ್ನು ಉಲ್ಲಂ ಸಿದ ಆರೋಪಕ್ಕೆ ಸಂಬಂಧಿಸಿ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ 100 ಕೋಟಿ ರೂ. ದಂಡವನ್ನು ಜಾರಿ ನಿರ್ದೇಶನಾಲಯ ವಿಧಿಸಿದೆ. 2007ರಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಅನ್ನು ಖರೀದಿಸುವಾಗ ಈ ಉಲ್ಲಂಘನೆ ನಡೆದಿದೆ. 8 ವರ್ಷ ನಡೆದ ತನಿಖೆಯ ಬಳಿಕ ಬ್ರಿಟನ್ ಮೂಲದ ಬ್ಯಾಂಕ್‌ನ ಅವ್ಯವಹಾರ ದೃಢಪಟ್ಟಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.