Advertisement

ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ಅವನಿ ಲೇಖರಾಗೆ ಚಿನ್ನದ ಪದಕ; ಪ್ರಧಾನಿ ಅಭಿನಂದನೆ

10:59 PM Jun 12, 2022 | Team Udayavani |

ಹೊಸದಿಲ್ಲಿ: ಫ್ರಾನ್ಸ್‌ನ ಚಾಟಿಯಾರೋದಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಎರಡನೇ ಚಿನ್ನದ ಪದಕಕ್ಕೆ ಗುರಿ ಇರಿಸಿದ ಅವನಿ ಲೇಖರಾ ಅವರಿಗೆ ಸಾಯ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

Advertisement

“ಅವನಿ ಲೇಖರಾ ವಿಶ್ವಕಪ್‌ ಕೂಟದಲ್ಲಿ ಎರಡನೇ ಚಿನ್ನ ಜಯಿಸಿದ್ದು ಹೆಮ್ಮೆಯ ಸಂಗತಿ. ಅಭಿನಂದನೆಗಳು. ಭವಿಷ್ಯದ ಸಾಧನೆಗೆ ಬೆಸ್ಟ್‌ ಆಫ್ ಲಕ್‌’ ಎಂಬುದು ಮೋದಿ ಹಾರೈಕೆ.

ಅವನಿ ಲೇಖರಾ ಶನಿವಾರ ವನಿತೆಯರ ಆರ್‌8 50 ಮೀ. ತ್ರೀ ಪೊಸಿಶನ್‌ ಎಸ್‌ಎಚ್‌1 ವಿಭಾಗದಲ್ಲಿ 458.3 ಅಂಕ ಗಳಿಸಿ ಬಂಗಾರಕ್ಕೆ ಗುರಿ ಇರಿಸಿದರು. ಇದಕ್ಕೂ ಮೊದಲು 10 ಮೀ. ಏರ್‌ ರೈಫ‌ಲ್‌ ಸ್ಟಾಂಡಿಂಗ್‌ ಎಸ್‌ಎಚ್‌1 ವಿಭಾಗದಲ್ಲಿ ಸ್ವರ್ಣ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next