ಹೊಸದಿಲ್ಲಿ: ಬಲಿಷ್ಠ ದೇಶದ್ರೋಹದ ಕಾನೂನು ಬೇಕು ಎಂದು ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರಕಾರ ಸೋಮವಾರ ನಿಲುವು ಬದಲಾಯಿಸಿದೆ.
ಬ್ರಿಟಿಷರ ಕಾಲದಲ್ಲಿ ರಚನೆಯಾಗಿದ್ದ ಕಾನೂನನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿರುವ ಅಫಿದ ವಿತ್‌ನಲ್ಲಿ ಉಲ್ಲೇಖಿಸಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮತ್ತು ಪ್ರಧಾನಿ ಮೋದಿಯವರ ನಿಲುವಿನಂತೆ ದೇಶ ದ್ರೋಹದ ಕಾಯ್ದೆಯ 124ಎ ವಿಧಿ ಯನ್ನು ಮತ್ತೊಮ್ಮೆ ಪರಿಶೀಲಿಸಲು ನಿರ್ಧರಿಸಿರುವುದಾಗಿ ಅಫಿದವಿತ್‌ನಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ.
ಸರಕಾರ ಮಾನವ ಹಕ್ಕು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಅವುಗಳ ಬಗ್ಗೆ ಅಪಾರ ಗೌರವ ಹೊಂದಿದೆ. ಅದಕ್ಕೆ ಅನುಸಾರ ವಾಗಿ ಪ್ರಧಾನಿ ಕೂಡ ಹಲವು ಸಂಘ ಟನೆಗಳ ಅಭಿಪ್ರಾಯವನ್ನು ಮನ್ನಿಸಿ ದ್ದಾರೆ ಎಂದು ಉಲ್ಲೇಖಿಸಲಾಗಿದೆ.