ನವದೆಹಲಿ: ಪಿಎಂ ಕೇರ್ಸ್ ಫಂಡನ್ನು ಸಂವಿಧಾನದ ನಿಯಮಗಳಡಿ ಅಥವಾ ಸಂಸದೀಯ ಕಾನೂನುಗಳಡಿ ರಚಿಸಿಲ್ಲ. ಇದು ಪೂರ್ಣವಾಗಿ ಸ್ವತಂತ್ರ ಸಾರ್ವಜನಿಕ ದತ್ತಿ ಸಂಸ್ಥೆ (ಟ್ರಸ್ಟ್). ಹಾಗಾಗಿ ಇದನ್ನು ಆರ್‌ಟಿಐ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಪಿಎಂ ಕೇರ್ಸ್ ಫಂಡ್ ನ್ನು ಸರ್ಕಾರಿ ಎಂದು ಘೋಷಿಸಬೇಕೆಂಬ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಈ ಉತ್ತರ ನೀಡಿದೆ. ಪಿಎಂ ಕೇರ್ಸ್ ಫಂಡ್ ಮೇಲೆ ಯಾವುದೇ ರಾಜ್ಯ, ಕೇಂದ್ರ ಸರ್ಕಾರಗಳ ನೇರ, ಪರೋಕ್ಷ ನಿಯಂತ್ರಣವಿಲ್ಲ. ಇದಕ್ಕೆ ಸರ್ಕಾರದಿಂದ, ಸರ್ಕಾರಿ ಸಂಸ್ಥೆಗಳಿಂದ ದೇಣಿಗೆ ಹೋಗುವುದಿಲ್ಲ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಮುಖ್ಯಸ್ಥರಾಗಿರುವುದು ಕೇವಲ ಆಡಳಿತಾತ್ಮಕ ಉದ್ದೇಶದಿಂದ ಮಾತ್ರ. ಇದರ ಲೆಕ್ಕಪತ್ರಗಳು ಪಿಎಂ ಕೇರ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿವೆ ಎಂದು ಕೇಂದ್ರ ಹೇಳಿದೆ.