Advertisement

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

07:31 PM Apr 29, 2024 | Team Udayavani |

ಕೊಪ್ಪಳ: ‘ಇಂಡಿಯಾ ಮೈತ್ರಿಕೂಟ, ಕಾಂಗ್ರೆಸ್ ನಲ್ಲಿ ಪಿಎಂ ಅಭ್ಯರ್ಥಿ ಯಾರೂ ಇಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಯಾವುದರಲ್ಲಿ ಕಡಿಮೆ‌ ಇದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಕುಷ್ಟಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ ‘ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಹಿಂದೆ ಬಿಜೆಪಿ ರಾಜ್ಯದಲ್ಲಿ 3 ವರ್ಷ 10 ತಿಂಗಳು ಆಡಳಿತ ಮಾಡಿತು, ಅದಕ್ಕೂ ಮೊದಲು 1 ವರ್ಷ 2 ತಿಂಗಳು ಕುಮಾರಸ್ವಾಮಿ ಸರ್ಕಾರ ಇತ್ತು. ಇವರು ಏನೂ ಮಾಡಲಿಲ್ಲ. ಬಿಜೆಪಿಯಲ್ಲಿ ಇಬ್ಬರು ಸಿಎಂ ಆದರು, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ 3 ವರ್ಷ 10 ತಿಂಗಳು ರಾಜ್ಯದಲ್ಲಿ ಅಭಿವೃದ್ಧಿ ಮಾಡಲಿಲ್ಲ. ಬಡವರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪ ಸಂಖ್ಯಾತರಿಗೆ ಏನೂ ಮಾಡಲಿಲ್ಲ, ಬದಲಾಗಿ ರಾಜ್ಯ ಲೂಟಿ ಹೊಡೆಯುತ್ತಿದ್ದರು’ ಎಂದು ಕಿಡಿ ಕಾರಿದರು.

‘ರಾಜ್ಯ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತು. ಇದನ್ನು ತನಿಖೆ ಮಾಡಿಸಿ ಎಂದು ನಾವು ಒತ್ತಾಯ ಮಾಡಿದರೂ ಆಗ ಬೊಮ್ಮಾಯಿ ಸರ್ಕಾರ ಏನೂ‌ ಮಾಡಲಿಲ್ಲ. ನಾವು ಅದನ್ನು ತನಿಖೆ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಅವರು ತಪ್ಪಿತಸ್ಥರಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಕೇಂದ್ರದಲ್ಲಿ ಮೋದಿ ಸರ್ಕಾರ ಸಂವಿಧಾನಕ್ಕೆ ವಿರುದ್ದವಾಗಿದೆ, ಸಂವಿಧಾನದ ಧ್ಯೇಯೋಧ್ಧೇಶ ನೆರವೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ
ಅಲ್ಪಸಂಖ್ಯಾತರ, ದಲಿತರು, ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

‘ಗ್ಯಾರಂಟಿ ಯೋಜನೆ ಜಾರಿ ಮಾಡಿ ಮನೆ ಮನೆಗೆ ತಲುಪಿಸುವ ಕೆಲಸ ನಾವು ಮಾಡಿದೆವು. ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿ ಜಾರಿ ಮಾಡುತ್ತೇವೆ ಎಂದಿದ್ದೆವು. ಸರ್ಕಾರ ಬಂತು, ಮೇ.20 ರಂದು ಪ್ರತಿಜ್ಞೆ ಸ್ವೀಕಾರ ಮಾಡಿದೆವು. ಅಲ್ಲಿಂದ ನೇರ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿ ಗಳನ್ನು ಹಂತ ಹಂತವಾಗಿ ಜಾರಿ ಮಾಡುವೆವು ಎಂದು ಆದೇಶ ಹೊರಡಿಸಿದೆವು. ಗ್ಯಾರಂಟಿಗಳಿಗೆ ಮೊದಲ ವರ್ಷ 36 ಸಾವಿರ ಕೋಟಿ ಮೀಸಲಿಟ್ಟೆವು. ಜೂ.11 ರಂದು ಶಕ್ತಿ ಯೋಜನೆಗೆ ಜಾರಿ ಕೊಟ್ಟೆವು. ಶಾಲಾ ಮಕ್ಕಳು, ಮಹಿಳೆಯರ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದೆವು’ ಎಂದರು.

Advertisement

ಈ ವರೆಗೂ 200 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಸಂಬಂಧಿಕರು, ತವರು ಮನೆ, ದೇವಸ್ಥಾನಕ್ಕೆ ಹೋಗಿದ್ದಾರೆ. ಅರಸಿಕೆರೆ ಮಹಿಳೆ ಬಸ್ ಟಿಕೆಟ್ ಹಾರ ನನಗೆ ಹಾಕಿದಳು, ಉಪಕಾರ ಸ್ಮರಣೆಯಿಂದ ಆ ಮಹಿಳೆ ನನಗೆ ಟಿಕೆಟ್ ಹಾರ ಹಾಕಿದ್ದು,ಇದಕ್ಕಿಂತ ಋಷಿ ಕೊಡುವುದು ಮತ್ತೊಂದು ಇಲ್ಲ ಎಂದರು.

ಜುಲೈ ತಿಂಗಳಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಕೊಟ್ಟೆವು. 2013-18 ರಲ್ಲಿ 7 ಕೆಜಿ ಉಚಿತ ಕೊಡುತ್ತಿದ್ದೆವು. ಬಿಜೆಪಿ ಬಂದು 2 ಕೆಜಿ ಕಡಿಮೆ‌ ಮಾಡಿದರು.
ಯಡಿಯೂರಪ್ಪ ಅವರಿಗೆ ಕೇಳಿದೆ, ಅವರು ಏನೂ ಕೇಳಲಿಲ್ಲ. ಚುನಾವಣೆಯಲ್ಲಿ ಐದು ಕೆಜಿ ಅಕ್ಕಿ ಸೇರಿ 10 ಕೇಹಿ ಅಕ್ಕಿ ಕೊಡಲು ತೀರ್ಮಾನ ಮಾಡಿದೆವು. ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದರೂ ಮೋದಿ ಅವರು ಅಕ್ಕಿ ಕೊಡಲಿಲ್ಲ . ಇದು ಬಿಜೆಪಿ ನಿಮಗೆ ಮಾಡಿದ ದೊಡ್ಡ ದ್ರೋಹ.
ಬಡವರು ಸಿದ್ದರಾಮಯ್ಯ, ಕಾಂಗ್ರೆಸ್ ಪರ ಆಗುತ್ತಾರೆ ಎಂದು ಅಕ್ಕಿ ನಿಲ್ಲಿಸಿದರು. ನಾವು ಪ್ರತಿ ತಿಂಗಳು 170 ರೂ. ನಂತೆ 1.50 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಹಣ ಕೊಡುತ್ತಿದ್ದೇವೆ ಎಂದರು.

8 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ವರ್ಷಕ್ಕೆ 36 ಸಾವಿರ, 2024-25ರಲ್ಲಿ ಕೋಟಿ 52 ಸಾವಿರ 9 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದರು.

ಮೋದಿ 2 ಕೋಟಿ‌ ಉದ್ಯೋಗ ಕೊಡುವ ಭರವಸೆ ನೀಡಿದರು. ಉದ್ಯೋಗ ಕೊಡಲಿಲ್ಲ. ಬಿಜೆಪಿ ಗ್ಯಾರಂಟಿ ಬಗ್ಗೆ ಟೀಕೆ ಮಾಡಿ ಖಜಾನೆ ಖಾಲಿಯಾಗಲಿದೆ ದಿವಾಳಿಯಾಗುತ್ತೆ ಎಂದರು. ಈಗ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ನಿಲ್ಲುತ್ತವೆ ಎಂದಿದ್ದಾರೆ. ನಾಲ್ಕು ವರ್ಷದಲ್ಲಿ ಐದು ಗ್ಯಾರಂಟಿ ಒಂದು ತಿಂಗಳೂ ನಿಲ್ಲಿಸುವುದಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಭರವಸೆ ಈಡೇರಿಸಿದ್ದೇವೆ. ಬಿಜೆಪಿ ಜನರ ಮುಂದೆ ಸತ್ಯ ಹೇಳಲಿ. ಮೋದಿ ಹೇಳಿದ 15 ಲಕ್ಷ ಬಂತಾ ? ಅಚ್ಚೇ ದಿನ್ ಬಂತಾ ? ರೈತೆ ಆದಾಯ ದುಪ್ಪಟ್ಟು ಮಾಡಿದರಾ? ಎಂದು ಪ್ರಶ್ನಿಸಿದರು.

2008-13ರ ವರೆಗೂ ರಾಜ್ಯದಲ್ಲಿ ಬಿಜೆಪಿಯ ಮೂವರು ಸಿಎಂ ಆದರು. ದೇವರಾಜ ಅರಸು ನಂತರ 5 ವರ್ಷ ಸಿಎಂ ಆಗಿದ್ದವನು ನಾನು ಮಾತ್ರ ಎಂದು ಇದೆ ವೇಳೆ ಹೇಳಿದರು.

ಎಐಸಿಸಿ ಐದು ಗ್ಯಾರಂಟಿ ಕಾರ್ಡ್ ಗೆ ಖರ್ಗೆ ಹಾಗೂ ರಾಹುಲ್ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ. ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ಕೊಡುತ್ತೇವೆ ಎಂದಿದ್ದಾರೆ 8500 ಮಾಸಿಕ ಕೊಡುತ್ತಾರೆ. ವರ್ಷಕ್ಕೆ 1 ಲಕ್ಷ 24 ಸಾವಿರ ಹಣ ಬರುತ್ತದೆ. ದೇಶದ ಎಲ್ಲ ಮಹಿಳೆಯರಿಗೆ ಈ ಯೋಜನೆ ಕೊಡುವ ಯೋಜನೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ 1 ಲಕ್ಷ ಸ್ಕಾಲರ್ ಶಿಪ್ ವೇತನ, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.

ಮೋದಿ ಪ್ರವಾಹ ಬಂದಾಗ, ಬರ ಬಂದಾಗ ಬರಲಿಲ್ಲ. ಚುನಾವಣೆ ಬಂದಾಗ ಬಂದು ಸುಳ್ಳು ಹೇಳಿಕೊಂಡು‌ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿ ಬಂಡವಾಳಿಗರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ನಾವು ರೈತರ ಬೆಳೆಗೆ MSP ಕೊಡುವೆವು ಕಾನೂನು ಮಾಡುತ್ತೇವೆ ಎಂದಿದ್ದೇವೆ
ಜತೆಗೆ ವಿಮೆ, ಜಾತಿ ಗಣತಿ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಮೀಸಲಾತಿ ಪರ ಇದೆ. ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಬಿಜೆಪಿ ಮೀಸಲಾತಿಯ ವಿರೋಧಿಗಳು. ಮಂಡಲ್ ಕಮಿಷನ್ ವರದಿ, ಹಿಂದುಳಿದ, ದಲಿತರಿಗೆ, ಮಹಿಳೆಯರಿಗೆ, ಸ್ಥಳೀಯ ಚುನಾವಣೆಯಲ್ಲಿ ಮೀಸಲಾತಿ ಕೊಟ್ಟಾಗ ವಿರೋಧ ಮಾಡಿದವರು ಬಿಜೆಪಿಗರು. ಈಗ ನಾವು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ‌ ಫ್ಯಾಕ್ಟರಿ. ಈ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಚುನಾವಣೆ. ನಾವು ಸತ್ಯವನ್ನು ಹೇಳುತ್ತಿದ್ದೇವೆ ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗಳಿ ಗೆ ಮತ ನೀಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next