Advertisement

ಮನಕುಲ ಒಳಿತಿಗೆ ಬೇಕು ಸಮೃದ್ಧ ಸಸ್ಯ ಸಂಪತ್ತು: ಪ್ರಾಚಾರ್ಯ ಡಾ|ಎಸ್‌.ಎನ್‌. ಶಿವರೆಡ್ಡಿ ಅಭಿಮತ

02:11 PM Jun 10, 2022 | Team Udayavani |

ಗಜೇಂದ್ರಗಡ: ಜಾಗತಿಕ ಮಟ್ಟದಲ್ಲಿ ಮನಕುಲ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ, ಸಮೃದ್ಧ ಸಸ್ಯ ಸಂಪತ್ತು ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪರಿಸರ ಉಳಿಸುವ ಬಗ್ಗೆ ಬೋಧನೆ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ಡಾ|ಎಸ್‌. ಎನ್‌. ಶಿವರೆಡ್ಡಿ ಹೇಳಿದರು.

Advertisement

ಪಟ್ಟಣದ ಎಸ್‌.ಎಂ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯದ ಬೋಧನೆ ಮಾಡುವುದರ ಜತೆಗೆ ಮನುಕುಲ ಉಳಿವಿಗೆ ಅಗತ್ಯವಾಗಿರುವ ಪರಿಸರ ಬೆಳವಣಿಗೆ ಬಗ್ಗೆ ಮೊದಲ ಆದ್ಯತೆ ನೀಡಿ ಪರಿಸರ ಕುರಿತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ದಿಸೆಯಲ್ಲಿ ಶಾಲಾ ಆವರಣದ ಸುತ್ತಲೂ ಹಲವಾರು ಗಿಡಗಳನ್ನು ಪೋಷಿಸಲಾಗುತ್ತಿದೆ ಎಂದರು.

ಅಲ್ಲದೇ, ಪರಿಸರದ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯದಿಂದಾಗಿ ಜೀವ ಸಂಕುಲಕ್ಕೆ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉಪನ್ಯಾಸ ಬಿ.ವಿ. ಮುನವಳ್ಳಿ ಮಾತನಾಡಿ, ಭೂಗೋಳ ಹಸಿರಾದಾಗ ಮಾತ್ರ ಪ್ರಕೃತಿಯ ಎಲ್ಲ ಜೀವಿಗಳು ಉಸಿರಾಡಲು ಸಾಧ್ಯ. ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು, ಪೋಷಿಸಿ ಮರವಾಗಿ ಬೆಳೆಸಬೇಕು. ಅರಣ್ಯ ನಾಶವಾದರೆ ಎದುರಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರು, ಆಹಾರದಷ್ಟೇ ಅರಣ್ಯವೂ ಮುಖ್ಯ ಎನ್ನುವಸಂಗತಿ ಸಮಾಜಕ್ಕೆ ಮನದಟ್ಟು ಮಾಡಿಕೊಡಬೇಕಾದ ಜವಾಬ್ದಾರಿ ವಿದ್ಯಾರ್ಥಿ ಸಮೂಹದ್ದಾಗಿದೆ ಎಂದರು.

ಎಂ.ಎಲ್‌. ಕ್ವಾಟಿ, ಎಸ್‌.ಕೆ. ಕಟ್ಟಿಮನಿ, ಎಲ್‌.ಕೆ. ಹಿರೇಮಠ, ಎಲ್‌. ಕೆ. ವದ್ನಾಳ, ಐ.ಎನ್‌. ಹಾಳಿ ಇತರರಿದ್ದರು.

Advertisement

ಸರ್ಕಾರಿ ಶಾಲೆ ನಂ. 4: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 4ರಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡಲಾಯಿತು. ಈ ವೇಳೆ ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಐ.ಎ. ರೇವಡಿ, ಮುಖ್ಯ ಶಿಕ್ಷಕಿ ಬಿ.ಟಿ. ಹೊಸಮನಿ, ಬಸವರಾಜ ಕೊಟಗಿ, ಎಸ್‌.ಕೆ. ಮಠದ, ಬಿ.ಸಿ. ಅಂಗಡಿ, ಬಸವರಾಜ ಪಟ್ಟೇದ, ಅಕ್ಕಮ್ಮ ನರಗುಂದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next