ನವದೆಹಲಿ:ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, ಇದರೊಂದಿಗೆ ಅಸ್ತಾನಾಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಇದನ್ನೂ ಓದಿ:ಕರ್ನಾಟಕದ 11 ಜನ ಮೀನುಗಾರರನ್ನು ವಶಕ್ಕೆ ಪಡೆದ ಗೋವಾ ಪೊಲೀಸರು
ಅಸ್ತಾನಾ ನೇಮಕಾತಿ ಪ್ರಶ್ನಿಸಿ ವಕೀಲ ಸದ್ರೆ ಅಲಾಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಡಿಎನ್ ಪಟೇಲ್ ಮತ್ತು ಜಸ್ಟೀಸ್ ಜ್ಯೋತಿ ಸಿಂಗ್ ಈ ಆದೇಶವನ್ನು ನೀಡಿರುವುದಾಗಿ ವರದಿ ಹೇಳಿದೆ.
ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿ ಹೊರಡಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶವನ್ನು ರದ್ದುಗೊಳಿಸುಂತ ಮನವಿ ಮಾಡಿದ್ದರು.
ದೂರಿನ ಪ್ರಕಾರ, ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಭಾರತದ ಸುಪ್ರೀಂಕೋರ್ಟ್ ಜಾರಿಗೊಳಿಸಿರುವ ನಿರ್ದೇಶನಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದೆ.
ದೆಹಲಿ ಪೊಲೀಸ್ ಕಮಿಷನರ್ ನೇಮಕಾತಿಗಾಗಿ ಯುಪಿಎಸ್ ಸಿ ಸಮಿತಿಯನ್ನು ರಚಿಸಿಲ್ಲ. ಅಲ್ಲದೇ ಕನಿಷ್ಠ ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನೂ ಕೂಡಾ ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದೆ. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.