Advertisement

ಆಟಿಕೆ ಪಿಸ್ತೂಲಿನಲ್ಲಿ ಆಡಿದವ ಇಂದು ಗಡಿ ಕಾಯುವ ಯೋಧ

12:50 AM Jan 27, 2019 | Team Udayavani |

ಸೇನೆಗೆ ಸೇರಬೇಕೆನ್ನುವ ಕನಸು ಹೊಂದಿದ್ದರೂ ಕೆಲವರು ಒಂದೆರಡು ಪ್ರಯತ್ನಗಳ ಬಳಿಕ ಕೈ ಬಿಡುವುದು ಇದೆ. ಆದರೆ ಇವರು ಹಾಗಲ್ಲ. 10 ಬಾರಿ ಪರೀಕ್ಷೆ ಎದುರಿಸಿ ತನ್ನ ಮಹದಾಸೆ ಈಡೇರಿಸಿಕೊಂಡಿದ್ದಾರೆ.

Advertisement

ಕುಂದಾಪುರ: ಯೋಧ ಬಸೂÅರಿನ ಪ್ರದೀಪ್‌ ಖಾರ್ವಿಯವರ ಯಶೋಗಾಥೆ ಆರಂಭ ವಾಗುವುದೇ ವಿಶೇಷ ಪುಟಗಳಿಂದ.

ಯೋಧನಾಗಬೇಕೆಂಬ ಆಸೆಯನ್ನು ಕಂಗಳಲ್ಲಿ ತುಂಬಿಕೊಂಡು ಸದಾ ಪರೀಕ್ಷೆ ಬರೆದರೂ ಅನುತ್ತೀರ್ಣನಾಗುತ್ತಿದ್ದರು ಪ್ರದೀಪ್‌. ಒಂದಲ್ಲ..ಒಂಬತ್ತು ಬಾರಿ. ಹಾಗೆಂದು ನಿರಾಶರಾಗಿ ಕೈಕಟ್ಟಿ ಕೊಂಡು ಕುಳಿತುಕೊಳ್ಳಲಿಲ್ಲ. ಬದಲಾಗಿ ಹತ್ತನೇ ಪ್ರಯತ್ನದಲ್ಲಿ ಕನಸನ್ನು ದಕ್ಕಿಸಿಕೊಂಡೇಬಿಟ್ಟರು.

ಸಾಂಬಾ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸು  ತ್ತಿರುವ ಪ್ರದೀಪ್‌ ಅಸೀಮ ಛಲ, ಸ್ಥೈರ್ಯ ಹಾಗೂ ಆತ್ಮಬಲದಿಂದ ರಾಷ್ಟ್ರದ ಗಡಿ ಕಾಯು ತ್ತಿದ್ದಾರೆ. “ನನ್ನ ಭಾರತ, ನನ್ನ ಹೆಮ್ಮೆ’ ಎನ್ನುತ್ತಾ ಯುವ ಸಮೂಹಕ್ಕೆ ಸ್ಫೂರ್ತಿಯ ಚಿಲುಮೆಯಾಗಿರುವವರು. ಅವರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೋದರ ಮಾವನೇ ಸ್ಫೂರ್ತಿ. 

ಯೋಧರಾದ ತಮ್ಮ ಮಾವನಿಂದಲೇ ಉತ್ತೇಜನ ಪಡೆದು ಚಿಕ್ಕ ಪ್ರಾಯದಲ್ಲೇ ಸೈನಿಕ ನಾಗಬೇಕು ಎನ್ನುವ ನಿರ್ಧಾರ ತಳೆದಿದ್ದರು ಪ್ರದೀಪ್‌. 9 ಬಾರಿ ನೇಮಕಾತಿ ಪರೀಕ್ಷೆ ಬರೆದು ಫೇಲಾಗಿ 2011ರ ಎ. 15ರಂದು 10ನೇ ಪ್ರಯತ್ನದಲ್ಲಿ ಯಶಸ್ವಿಯಾದರು.

Advertisement

ಬಸೂÅರು ವಿಲಾಸಕೇರಿಯ ಜನಾರ್ದನ ಖಾರ್ವಿ ಹಾಗೂ ಗೌರಿ ಖಾರ್ವಿ ದಂಪತಿಯ ನಾಲ್ವರು (ಇಬ್ಬರು ಗಂಡು, ಇಬ್ಬರು ಹೆಣ್ಣು) ಮಕ್ಕಳ ಪೈಕಿ ಮೂರನೆಯವರು ಪ್ರದೀಪ್‌. ಬಸೂÅರಿನ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಿವೇದಿತಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ಶಿಕ್ಷಣ ಹಾಗೂ ಪ.ಪೂ. ಶಿಕ್ಷಣವನ್ನು ಬಸೂÅರಿನ ಶಾರದಾ ಕಾಲೇಜಿನಲ್ಲಿ ಪೂರೈಸಿದರು. 

ಜನ್ಮದಿನದಂದೇ ಸೇನೆಗೆ ನೇಮಕ
ಪ್ರದೀಪ್‌ ಖಾರ್ವಿ 1988ರ ಎ. 15ರಂದು ಜನಿಸಿದ್ದು, ಜನ್ಮದಿನ ಅಂದರೆ 2011ರ ಎ.15 ರಂದು ಸೇನೆಗೆ ನೇಮಕಗೊಂಡು ತಮ್ಮ ಬದುಕಿನ ಅತ್ಯುನ್ನತ ಕನಸನ್ನು ಈಡೇರಿಸಿಕೊಂಡರು. ಹಾಗಾಗಿ ಆ ದಿನಕ್ಕೆ ಪ್ರತಿವರ್ಷವೂ ಇಮ್ಮಡಿ (ಡಬ್ಬಲ್‌) ಸಂಭ್ರಮ.

ವಿವಿಧೆಡೆ ಸೇವೆ
ಪ್ರದೀಪ್‌ ಅವರು ಗಡಿ ಭದ್ರತಾ ಪಡೆಯ ವಿವಿಧೆಡೆ 7 ವರ್ಷ ದುಡಿದಿದ್ದಾರೆ. 2011 ರಲ್ಲಿ ಯಲಹಂಕದಲ್ಲಿ 9 ತಿಂಗಳು ತರಬೇತಿ. ಅಲ್ಲಿಂದ ಎರಡೂವರೆ ವರ್ಷ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಿಯೋಜನೆ. 2014ರಿಂದ ಗಡಿ ರಾಜ್ಯ ಜಮ್ಮುವಿನಲ್ಲಿ ಸೇವೆ ಸಲ್ಲಿಕೆ. ಸದ್ಯ ಜಮ್ಮುವಿನ ಸಾಂಬಾ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಕ್ಸಲ್‌ ದಾಳಿಯ ನೆನಪು
ಛತ್ತೀಸ್‌ಗಢದಲ್ಲಿ ನಿಯೋಜನೆಗೊಂಡ 2ನೇ ದಿನ ನಕ್ಸಲ್‌ ದಾಳಿಗೆ 89 ಬೆಟಾಲಿಯನ್‌ ವಾಹನ ಬ್ಲಾಸ್ಟ್‌ ಆಗಿದ್ದ ನೆನಪು ಈಗಲೂ ಕಣ್ಣ ಮುಂದೆ ಬರುತ್ತದೆ ಎನ್ನುವ ಪ್ರದೀಪ್‌, 2016ರಲ್ಲಿ 2 ಸಲ ಗುಂಡಿನ ದಾಳಿಯಾಗಿದ್ದು, ಆ ಸಮಯದಲ್ಲಿ 3 ದಿನ ಸಂಪರ್ಕದಲ್ಲೇ ಇರಲಿಲ್ಲ. 3 ದಿನ ಹೊಟ್ಟೆಗೆ ಏನೂ ಇಲ್ಲದೇ ಇದ್ದೆವು. ಆದರೂ ದೇಶ ಕಾಯುವ ಕೆಲಸ ಬಹಳ ಶ್ರೇಷ್ಠವಾದದ್ದು ಎನ್ನುತ್ತಾರೆ ಅವರು.

ಏಳನೇ ತರಗತಿಯಲ್ಲಿದ್ದಾಗ ಸೇನೆಯಲ್ಲಿದ್ದ ಮಾವ ಗಣಪತಿ ಖಾರ್ವಿಯವರು ಒಂದು ಆಟಿಕೆ ಪಿಸ್ತೂಲು ನೀಡಿದ್ದರು. ಆಗಲೇ ನಾನು ಕೂಡ ಸೇನೆಗೆ ಸೇರಬೇಕು ಎನ್ನುವ ಆಸೆ ಬೆಳೆಯಿತು. ನಾನೀಗ ಸೇನೆಯಲ್ಲಿದ್ದೇನೆ ಅಂದರೆ ಅದಕ್ಕೆ ಮಾವನೇ ಸ್ಫೂರ್ತಿ. ನಾನೊಬ್ಬ ಯೋಧನಾಗಿರುವುದಕ್ಕೆ, ಭಾರತಾಂಬೆಯ ಸೇವೆ ಮಾಡುತ್ತಿರುವುದಕ್ಕೆ ತುಂಬಾ ಹೆಮ್ಮೆಯಿದೆ. ಎಲ್ಲರಿಗೂ ಈ ಅವಕಾಶ ಸಿಗದು.
– ಪ್ರದೀಪ್‌ ಖಾರ್ವಿ, ಯೋಧ, ವಿಲಾಸಕೇರಿ

Advertisement

Udayavani is now on Telegram. Click here to join our channel and stay updated with the latest news.

Next