Advertisement
ಶುಕ್ರವಾರದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ನಂತರ ಯಾರು ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿದ್ದಾರೆ, ಯಾರು ಉತ್ತಮ ಬೌಲಿಂಗ್ ನಡೆಸಿದ್ದಾರೆ ನೋಡೋಣ.
ಅಫ್ಘಾನಿಸ್ಥಾನ ವಿರುದ್ಧ ಹೊಡಿಬಡಿ ಪ್ರದರ್ಶನ ನೀಡಿದ ಇಂಗ್ಲೆಡ್ ಕಪ್ತಾನ ಇಯಾನ್ ಮೋರ್ಗನ್ ಈ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಮೋರ್ಗನ್ ಆರು ಇನ್ನಿಂಗ್ಸ್ ಗಳಲ್ಲಿ ಒಟ್ಟು 22 ಸಿಕ್ಸ್ ಬಾರಿಸಿದ್ದು, ಅಫ್ಘಾನ್ ವಿರುದ್ಧ ಒಂದೇ ಪಂದ್ಯದಲ್ಲಿ 17 ಸಿಕ್ಸ್ ಬಾರಿಸಿದ್ದರು. ಆಸೀಸ್ ನಾಯಕ ಆರೋನ್ ಫಿಂಚ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 18 ಸಿಕ್ಸ್ ಬಾರಿಸಿದ್ದಾರೆ. 10 ಸಿಕ್ಸ್ ಬಾರಿಸಿರುವ ಕ್ರಿಸ್ ಗೇಲ್ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ರೋಹಿತ್ ಶರ್ಮಾ ಏಳು ಸಿಕ್ಸ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅತೀ ಹೆಚ್ಚು ಬೌಂಡರಿ
ಈ ಕೂಟದಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್. ಅವರು ಆರು ಪಂದ್ಯಗಳಲ್ಲಿ 48 ಬೌಂಡರಿ ಬಾರಿಸಿದ್ದಾರೆ. ಅಸೀಸ್ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆರೋನ್ ಫಿಂಚ್ ತಲಾ 46 ಬೌಂಡರಿ ಬಾರಿಸಿ ನಂತರದೆರಡು ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು 31 ಬೌಂಡರಿ ಬಾರಿಸಿದ್ದಾರೆ.
Related Articles
ಕಿವೀಸ್ ನಾಯಕ ಕೇನ್ ವಿಲಿಯುಮ್ಸನ್ ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಐದು ಇನ್ನಿಂಗ್ಸ್ ಗಳಲ್ಲಿ 414 ರನ್ ಗಳಿಸಿರುವ ಕೇನ್ ಬ್ಯಾಟಿಂಗ್ ಸರಾಸರಿ 128.0. ಎರಡನೇ ಸ್ಥಾನದಲ್ಲಿರುವ ಶಕೀಬ್ ಬ್ಯಾಟಿಂಗ್ ಸರಾಸರಿ 95.30. ಭಾರತದ ರೋಹಿತ್ ಶರ್ಮಾ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಅವರು 84.50 ಸರಾಸರಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
Advertisement
ಅತ್ಯುತ್ತಮ ಬೌಲಿಂಗ್ ಸ್ಟ್ರೈಕ್ ರೇಟ್ಇನ್ನು ಬೌಲರ್ ಗಳ ವಿಷಯಕ್ಕೆ ಬರುವುದಾದರೆ ಸತತ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಿತ್ತ, ವಿಶ್ವಕಪ್ ಹ್ಯಾಟ್ರಿಕ್ ವೀರ ಮೊಹಮ್ಮದ್ ಶಮಿ ಈ ಕೂಟದಲ್ಲಿ ಅತ್ಯುತ್ತಮ ಬೌಲಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಶಮಿ ಸ್ಟ್ರೈಕ್ ರೇಟ್ 12.12. ಎರಡನೇ ಸ್ಥಾನದಲ್ಲಿರುವ ಆಸೀಸ್ ವೇಗಿ ಜೇಸನ್ ಬೆಹ್ರಾಂಡಫ್ 19ರ ಸ್ಟ್ರೈಕ್ ರೇಟ್ ನಲ್ಲಿ ಬೌಲಿಂಗ್ ನಡೆಸಿದ್ದಾರೆ. ಅಸಿಸ್ ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಏಳು ಪಂದ್ಯಗಳಲ್ಲಿ 20.42ರ ಬೌಲಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ.