Advertisement

ಕನ್ನಡ ಚಿತ್ರಗಳಿಗಾಗಿ “ಪ್ಲೇ ಫ್ಲಿಕ್ಸ್‌’

05:26 AM Feb 18, 2019 | |

ತಂತ್ರಜ್ಞಾನ ಬೆಳೆದಂತೆ ಚಿತ್ರಮಂದಿರಗಳಿಗೆ ಹೋಗಿ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಮನೆಯಲ್ಲೇ ಟಿವಿ, ಕಂಪ್ಯೂಟರ್‌, ಮೊಬೈಲ್‌ ಫೋನ್‌ ಮೂಲಕ ತಮಗೆ ಬೇಕಾದ ಸಿನಿಮಾಗಳನ್ನು, ಬೇಕಾದ ಸಮಯಕ್ಕೆ ವೀಕ್ಷಿಸಲು “ಅಮೆಜಾನ್‌ ಪ್ರೈಮ್‌’, “ನೆಟ್‌ಫ್ಲಿಕ್ಸ್‌’ ಮೊದಲಾದ ಕಂಪೆನಿಗಳು ಹೊಸ ದಾರಿಯನ್ನೆ ಹುಡುಕಿಕೊಟ್ಟಿವೆ. ಇಂದು ಆನ್‌ಲೈನ್‌ನಲ್ಲಿ ಸಿನಿಮಾಗಳನ್ನು ವೀಕ್ಷಿಸಲು ಪ್ರತಿದಿನ ಲಕ್ಷಾಂತರ ಪ್ರೇಕ್ಷಕರು ಇವುಗಳಿಗೆ ಚಂದಾದಾರರಾಗುತ್ತಿದ್ದಾರೆ. 

Advertisement

ಇವೆಲ್ಲದರ ನಡುವೆ ಕನ್ನಡದಲ್ಲಿಯೂ “ಅಮೆಜಾನ್‌ ಪ್ರೈಮ್‌’, “ನೆಟ್‌ಫ್ಲಿಕ್ಸ್‌’ ನಂಥದ್ದೇ “ಪ್ಲೇ ಫ್ಲಿಕ್ಸ್‌’ ಎನ್ನುವ ಆನ್‌ಲೈನ್‌ ಸಿನಿಮಾ ಚಾನೆಲ್‌ ಆರಂಭವಾಗಿದೆ. ಇನ್ನೊಂದು ವಿಶೇಷವೆಂದರೆ, ಕನ್ನಡ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ, ಕನ್ನಡ ಚಿತ್ರಗಳನ್ನು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ “ಪ್ಲೇ ಫ್ಲಿಕ್ಸ್‌’ ವಾಹಿನಿಯನ್ನು “ಕಂಟೆಂಟ್‌ ಬ್ರಹ್ಮ ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ’ ಸಂಸ್ಥೆಯ ಮೂಲಕ ಕನ್ನಡಿಗರೇ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. 

ಇತ್ತೀಚೆಗೆ “ಪ್ಲೇ ಫ್ಲಿಕ್ಸ್‌’ ಲೋಗೋವನ್ನು ಹಿರಿಯ ನಿರ್ದೇಶಕ ಟಿ.ಎನ್‌ ಸೀತಾರಾಮ್‌ ಅನಾವರಣಗೊಳಿಸಿದರು. ಇದೇ ವೇಳೆ ನಿರ್ದೇಶಕರುಗಳಾದ ಸತ್ಯ ಪ್ರಕಾಶ್‌, ಪಿ. ಶೇಷಾದ್ರಿ, ಚೇತನ್‌, ರಮೇಶ್‌ ಇಂದಿರಾ, ವಿನು ಬಳಂಜ, ಅರವಿಂದ್‌ ಕೌಶಿಕ್‌, ಪವನ್‌ ಒಡೆಯರ್‌ , ಪ್ರವೀಣ್‌ ಡಿ. ರಾವ್‌, ನಟಿ ಅಪೇಕ್ಷಾ ಪುರೋಹಿತ್‌ ಮುಂತಾದವರು ಉಪಸ್ಥಿತರಿದ್ದರು. ಇನ್ನು “ಪ್ಲೇ ಫ್ಲಿಕ್ಸ್‌’ನಲ್ಲಿ ನೂರಕ್ಕೆ ನೂರರಷ್ಟು ಕನ್ನಡದ ಕುರಿತ ಕಾರ್ಯಕ್ರಮಗಳು ಸಿಗಲಿದೆ.

ಕೇವಲ ಮನರಂಜನೆ ಮಾತ್ರವಲ್ಲದೆ ಆರೋಗ್ಯ, ಕ್ರೀಡೆ, ಕೃಷಿ, ಅಡುಗೆ, ಕನ್ನಡದ ಕ್ಲಾಸಿಕ್‌ ಧಾರವಾಹಿಗಳಾದ ಮಾಯಾಮೃಗ, ಮನ್ವಂತರ ಮುಂತಾದವುಗಳನ್ನು ನೋಡಬಹುದುದಾಗಿದೆ. ಸದ್ಯ “ಪ್ಲೇ ಫ್ಲಿಕ್ಸ್‌’ನಲ್ಲಿ ಪ್ರಸಾರ ಮಾಡಲು ಕನ್ನಡದ ಅನೇಕ ಸೂಪರ್‌ ಹಿಟ್‌ ಚಿತ್ರಗಳ ಹಕ್ಕುಗಳನ್ನು ಪಡೆದುಕೊಳ್ಳಲಾಗಿದ್ದು, ವೈಟ್‌ ಪ್ಯಾಂಥರ್‌, ಭೂಮಿಕಾ ಮತ್ತು ಟೆಂಟ್‌ ಸಿನಿಮಾದ ಸಹಯೋಗದೊಂದಿಗೆ ಧಾರಾವಾಹಿ, ಕಿರುಚಿತ್ರಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಟ್ರೆಲರ್‌, ಟೀಸರ್‌ಗಳೂ “ಪ್ಲೇ ಫ್ಲಿಕ್ಸ್‌’ನಲ್ಲಿ ಸಿಗಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next