Advertisement

ಸ್ವದೇಶಿ ಸಮರ ಕಾಪ್ಟರ್‌ ಸೃಷ್ಟಿಗೆ ವೇದಿಕೆ ಸಜ್ಜು

09:57 AM Mar 03, 2020 | sudhir |

ಹೊಸದಿಲ್ಲಿ: ಅಮೆರಿಕದ ಅತ್ಯಾಧುನಿಕ ಮತ್ತು ಶಕ್ತಿಶಾಲಿ ಅಪಾಚೆ ಸೇನಾ ಹೆಲಿಕಾಪ್ಟರ್‌ಗಳಿಗೆ ಸರಿಸಮಾನವಾದ ಹೆಲಿಕಾಪ್ಟರ್‌ಗಳನ್ನು ದೇಶೀಯವಾಗಿ ಉತ್ಪಾದಿಸುವ ಮಹತ್ವದ ಸಾಹಸಕ್ಕೆ ಹಿಂದೂ ಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮುಂದಾಗಿದೆ. ಎಚ್‌ಎಎಲ್‌ನ ಮುಖ್ಯಸ್ಥರಾದ ಆರ್‌. ಮಾಧವನ್‌ ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ್ದಾರೆ.

Advertisement

ಹೊಸ ಹೆಲಿಕಾಪ್ಟರ್‌ನ ಮಾದರಿ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರಕಾರ ಇದಕ್ಕೆ ಅನುಮತಿ ಕೊಟ್ಟಲ್ಲಿ 2023ರೊಳಗೆ 500 ಹೆಲಿಕಾಪ್ಟರ್‌ಗಳನ್ನು ತಯಾ ರಿಸುವ ಗುರಿ ಇದೆ. 2020ರಲ್ಲೇ ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಪೂರ್ಣ ಪ್ರಮಾಣದ ಮೊದಲ ಕಾಪ್ಟರ್‌ 2027ಕ್ಕೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಮೂಲ ಮಾದರಿ ಸಿದ್ಧ
ಈ ಕಾಪ್ಟರ್‌ಗಿನ್ನೂ ಹೆಸರಿಟ್ಟಿಲ್ಲ. ಆದರೆ 2027 ರೊಳಗೆ ಈ ಹೊಸ ಮಾದರಿಯ, 10-12 ಟನ್‌ ತೂಕದ ಸೇನಾ ಕಾಪ್ಟರನ್ನು ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಇದರ ಮೂಲ ಮಾದರಿ ರೂಪುರೇಷೆ ತಯಾ ರಿಸಲಾಗಿದ್ದು, ಇದಕ್ಕೆ ಕೇಂದ್ರ ಒಪ್ಪಿಗೆ ಕೊಟ್ಟರೆ 2023ರ ಹೊತ್ತಿಗೆ ಸುಮಾರು 500 ಹೆಲಿಕಾಪ್ಟರ್‌ಗಳನ್ನು ಸಿದ್ಧ ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದಕ್ಕೆ 9,600 ಕೋ.ರೂ. ಖರ್ಚಾಗಲಿದೆ ಎಂದು ಮಾಧವನ್‌ ತಿಳಿಸಿದ್ದಾರೆ.

“ಮಿ-17′ ಪಡೆಗೆ ಗುಡ್‌ಬೈ
ಹೊಸ ಮಾದರಿಯ ಈ ಹೆಲಿಕಾಪ್ಟರ್‌ಗಳನ್ನು ವಾಯುಪಡೆಯ ಬೆನ್ನೆಲುಬು ಎಂದೇ ಹೇಳ ಲಾಗುವ “ಎಂಐ-17′ ಸಮರ ಹೆಲಿಕಾಪ್ಟರ್‌ಗಳ ಬದ ಲಾಗಿ ಬಳಸಲಾಗುತ್ತದೆ. ಹಾಲಿ “ಎಂಐ-17′ ಹೆಲಿ ಕಾಪ್ಟರ್‌ಗಳನ್ನು 2032ರ ಹೊತ್ತಿಗೆ ಸೇವೆಯಿಂದ ನಿವೃತ್ತಿಗೊಳಿಸುವ ಇರಾದೆ ವಾಯುಪಡೆಗೆ ಇದೆ. ಅವುಗಳ ಜಾಗಕ್ಕೆ ಅಪಾಚಿ ತತ್ಸಮಾನ ಹೆಲಿಕಾಪ್ಟರ್‌ಗಳು ಸೇರಿಕೊಳ್ಳಲಿವೆ.

ಹೊಸ ಹೆಲಿಕಾಪ್ಟರ್‌ನ ರೂಪುರೇಷೆ
– ಧ್ರುವ ಹೆಲಿಕಾಪ್ಟರ್‌ ವಿನ್ಯಾಸವನ್ನೇ ಆಧಾರವಾಗಿರಿಸಿ ಹೊಸ ಹೆಲಿಕಾಪ್ಟರ್‌ ವಿನ್ಯಾಸ
– ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಗಳಿಗೆ ಪ್ರತ್ಯೇಕ ಮಾದರಿ
– ನೌಕಾಪಡೆಗಾಗಿ ಸಿದ್ಧಗೊಳ್ಳುವ ಹೆಲಿಕಾಪ್ಟರ್‌ಗಳಿಗೆ ರೆಕ್ಕೆ ಮಡಚುವ ಸೌಲಭ್ಯ
– ಎಲ್ಲ ಮಾದರಿ ವಿಮಾನಗಳಿಗೆ ಎರಡು ಇಂಜಿನ್‌ ಶಕ್ತಿ
– ವಾಯು ದಾಳಿ, ಸರಕು -ಶಸ್ತ್ರಾಸ್ತ್ರ ಸಾಗಣೆ, ಶತ್ರು ಹುಡುಕಾಟಕ್ಕೆ ಪೂರಕವಾಗಿ ನಿರ್ಮಾಣ
– ಅತ್ಯಾಧುನಿಕ ಶಸ್ತ್ರಾಸ್ತ್ರ ದಾಸ್ತಾನು, ನಿರ್ವಹಣೆಯ ಹೊಸ ತಂತ್ರಜ್ಞಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next